'ಕೋಟೆ'ಯಲ್ಲಿ ರಂಗು ರಂಗಿನ ಹಾಡು
ಎಂ.ಮಂಜುನಾಥ್ ಅವರು ನಿರ್ಮಿಸುತ್ತಿರುವ 'ಕೋಟೆ' ಚಿತ್ರದ ಚಿತ್ರೀಕರಣ ಹುಬ್ಬಳ್ಳಿ ನಗರದಲ್ಲಿ ನಡೆಯುತ್ತಿದೆ. ಚಿತ್ರಕ್ಕಾಗಿ ವಿ.ನಾಗೇಂದ್ರಪ್ರಸಾದ್ ಬರೆದಿರುವ 'ಜಗವೇ ಬಣ್ಣ ಬಣ್ಣ ಸ್ವಲ್ಪ ನೋಡಣ್ಣ' ಎಂಬ ಗೀತೆಗೆ ಪ್ರಜ್ವಲ್, ಡಿಂಪಲ್ ಹಾಗೂ ಗಾಯಿತ್ರಿರಾವ್ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ಹೆಜ್ಜೆ ಹಾಕಿದರು. ಪ್ರದೀಪ್ ಅಂತೋಣಿ ಈ ಗೀತೆಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
'ಸಂಗಾತಿ', 'ನನ್ನವನು' ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀನಿವಾಸರಾಜು ಈ ಚಿತ್ರದ ನಿರ್ದೇಶಕರು. ಪ್ರಜ್ವಲ್‌ದೇವರಾಜ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿಯರು ಗಾಯಿತ್ರಿರಾವ್ ಹಾಗೂ ಡಿಂಪಲ್. ಇತ್ತೀಚೆಗೆ 'ಮಗಧೀರ' ಚಿತ್ರದ ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ್, ನಟ ಸಾಯಿಕುಮಾರ್ ಸಹೋದರ ರವಿಶಂಕರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಲಾವಿದರು.
ರಘುದೀಕ್ಷಿತ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಕೆ.ದತ್ತು ರವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ-ಡಿಫರೆಂಟ್ ಡ್ಯಾನಿ ಸಾಹಸ, ಯೋಗರಾಜ್‌ಭಟ್, ರಾಘವೇಂದ್ರ ಕಾಮತ್ ಹಾಗೂ ನಾಗೇಂದ್ರಪ್ರಸಾದ್ ಗೀತರಚನೆ, ಶಿವಶಂಕರ್, ಇಮ್ರಾನ್ ಮತ್ತು ಹರೀಶ್ ಪೈ ನೃತ್ಯ ನಿರ್ದೇಶನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಹಾಗೂ ಸುಧೀಂದ್ರ ಹೊಸಳ್ಳಿ ನಿರ್ಮಾಣ ನಿರ್ವಹಣೆ 'ಕೋಟೆ' ಚಿತ್ರಕ್ಕಿದೆ.


Click it and Unblock the Notifications











