ನಟ ಪ್ರಭುದೇವ, ನಯನತಾರಾಗೆ ಸಮನ್ಸ್ ಜಾರಿ
"ತಮ್ಮ ಪತಿಯನ್ನು ಮರಳಿ ತಮಗೆ ದೊರಕಿಸಿಕೊಡಿ. ಅವರು ದಾರಿ ತಪ್ಪುತ್ತ್ತಿದ್ದಾರೆ. ನಟಿ ನಯನತಾರಾರನ್ನು ವರಿಸಲು ಅವರು ಸಿದ್ಧತೆ ನಡೆಸಿದ್ದಾರೆ" ಎಂದು ಪ್ರಭುದೇವ ಪತ್ನಿ ರಾಮಲತಾ ಅವರು ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಈ ಸಂಬಂಧ ನ್ಯಾಯಾಲಯ ಪ್ರಭುದೇವ ಮತ್ತು ನಯನತಾರಾಅವರಿಗೆ ಸಮನ್ಸ್ ಜಾರಿ ಮಾಡಿದೆ. ಅಕ್ಟೋಬರ್ 19ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ.
ಈ ಹಿಂದೆಯೂ ರಾಮಲತಾ ಅವರು ಪ್ರಭುದೇವ ವಿರುದ್ಧ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈಗ ಸಲ್ಲಿಸಿರುವ ಎರಡನೆ ಅರ್ಜಿಯಲ್ಲಿ ಪ್ರಭುದೇವ ಮೇಲೆ ಆರೋಪಗಳ ಸುರಿಮಳೆ ಗರೆದಿದ್ದಾರೆ. ಪ್ರಭು ಮತ್ತು ನಯನತಾರಾ ಇಬ್ಬರೂ ಒಟ್ಟೊಟ್ಟಿಗೆ ಸಭೆ ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ. ಇತ್ತೀಚೆಗೆ ಇವರಿಬ್ಬರಿಗೂ ಅತ್ಯುತ್ತಮ ಜೋಡಿ ಎಂಬ ಸಿನಿಮಾ ಸೌತ್ ಸ್ಕೋಪ್ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗಿದೆ.
ನಯನತಾರಾ ಚೆನ್ನೈಗೆ ಬಂದಾಗಲೆಲ್ಲಾ ಪ್ರಭುದೇವಾ ಅವರೊಂದಿಗೆ ಇರುತ್ತಾರೆ. ಇವರಿಬ್ಬರೂ ಚೆನ್ನೈನ ಪಾರ್ಕ್ ಹೋಟೆಲ್‌ನಲ್ಲೇ ತಂಗುತ್ತಾರೆ. ದಾರಿ ತಪ್ಪುತ್ತಿರುವ ತಮ್ಮ ಗಂಡನನ್ನು ಮರಳಿ ನನಗೆ ದೊರಕಿಸಿ ಕೊಡಿ ಎಂದು ರಾಮಲತಾ ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ. ಸಂಸಾರ ನಡೆಸುವುದು ಕಷ್ಟವಾಗುತ್ತಿದೆ. ಮಕ್ಕಳ ಲಾಲನೆ, ಪಾಲನೆಗೂ ಕಷ್ಟವಾಗಿದೆ. ತಮ್ಮ ಸಂಸಾರವನ್ನು ನೀರು ಪಾಲಗದಂತೆ ರಕ್ಷಿಸಿ ಎಂದು ಆಕೆ ಗೋಗರೆದಿದ್ದಾರೆ.


Click it and Unblock the Notifications











