ಅಭಿಮಾನಿಗಳಿಂದ ಹೂವಿನಲಾರಿಯಲ್ಲಿ ದರ್ಶನ್ ಮೆರವಣಿಗೆ!

ಅವರಿಗಿಂತ ಎಷ್ಟೋ ಪಟ್ಟು ಹೆಚ್ಚು ಖುಷಿಯಾಗಿದ್ದಾರೆ ಚಾಲೇಂಜಿಂಗ್ ಸ್ಟಾರ್ ಎಂದು ಬಿರುದು ನೀಡಿರುವ ಅವರ ಅಭಿಮಾನಿಗಳು. ಒಟ್ಟಿನಲ್ಲಿ ದುರಂತಮಯವಾಗಿದ್ದ ದರ್ಶನ್ ಜೀವನಕ್ಕೆ ಹೊಸ ಮರುಹುಟ್ಟಿನ ಗಾಳಿ ಲಭಿಸಿದೆ. ಜೈಲುಹಕ್ಕಿ ಈಗ ಸ್ವತಂತ್ರ ಹಾರಾಟ ನಡೆಸಲು ಸ್ವತಂತ್ರವಾಗಿದೆ.
ಷರತ್ತುಬದ್ಧ ಜಾಮೀನು ಕೋರ್ಟಿನಿಂದ ಘೋಷಣೆ ಆಗುತ್ತಿದ್ದಂತೆ ಅಲ್ಲಿ ಅವರ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದಾರೆ. ಮೊದಲೇ ನಿರ್ಧರಿಸಿದ್ದವರಂತೆ ಅಭಿಮಾನಿಗಳು ಅವರ ಪರ ಘೋಷಣೆ ಹಾಗೂ ಸಾರಥಿಗೆ ಜಯವಾಗಲಿ ಎಂದು ಕೂಗಿತ್ತಿದ್ದುದು ಕೇಳಿ ಬರುತ್ತಿದೆ.
ಎಲ್ಲರ ಮುಖದಲ್ಲಿ ಈಗ ಮುಗುಳ್ನಗು, ಮಂದಹಾಸ ಮನೆಮಾಡಿದೆ. ಚಿತ್ರೀಕರಣದ ಹಂತದಲ್ಲಿರುವ ದರ್ಶನ್ ಚಿತ್ರಗಳ ನಿರ್ಮಾಪಕರು, ನಿರ್ದೇಶಕರು ಹಾಗೂ ಸಹಕಲಾವಿದರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ನಂಬಲರ್ಹ ಮೂಲದಿಂದ ಬಂದಿರುವ ಸುದ್ದಿಯ ಪ್ರಕಾರ ದರ್ಶನ್ ಅಭಿಮಾನಿಗಳು ಅವರನ್ನು ಹೂವಿನಿಂದ ತುಂಬಿದ ಲಾರಿಯಲ್ಲಿ ಪರಪ್ಪನ ಅಗ್ರಹಾರದಿಂದ ಮನೆಯವರೆಗೆ ಮೆರವಣಿಗೆ ಮೂಲಕ ಕರೆದುಕೊಂಡು ಬರಲಿದ್ದಾರೆ. ಹಾಗೂ ಜೊತೆಯಲ್ಲಿ ಇನ್ನೆರಡು ಲಾರಿಗಳಲ್ಲಿ ಹೂವು ತುಂಬಿಕೊಂಡು ದರ್ಶನ್ ಪರ ಘೋಷಣೆ ಕೂಗುತ್ತಾ ದರ್ಶನ್ ಗೆ ಹೂವಿನ ಹಾರ ಹಾಗೂ ಹೂವಿನಿಂದ ಪೂಜೆ ಮಾಡುತ್ತಾ ಸಾಗಲಿದ್ದಾರೆ.
ಬಿಡುಗಡೆಯ ತಕ್ಷಣದ ಆ ಕ್ಷಣಕ್ಕಾಗಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ದರ್ಶನ್ ಕಣ್ಣಿಂದ ನೀರು ಕಟ್ಟೆಯೊಡೆದು ಬರುವುದು ಗ್ಯಾರಂಟಿ..!


Click it and Unblock the Notifications











