ಬಿಡುಗಡೆಗೊಂಡ ದರ್ಶನ್ ಎಲ್ಲಿಗೆ ಹೋಗುತ್ತಿದ್ದಾರೆ?

ಜೈಲಿನ ಹೊರಗೆ ದರ್ಶನ ಸಿಗದಿದ್ದರೂ ಬೇಸರಿಸಿಕೊಳ್ಳದೇ ಕೆಲವು ಅಭಿಮಾನಿಗಳು ದರ್ಶನ್ ನಿವಾಸದತ್ತ ತೆರಳುತ್ತಿದ್ದಾರೆ. ಇಲ್ಲಿ ದರ್ಶನ್ ಸಿಗದಿದ್ದರೂ ಅಲ್ಲಿ ಸಿಗುವ ಭರವಸೆಯಲ್ಲಿದ್ದಾರೆ.
ಆದರೆ ದರ್ಶನ್ ನೇರವಾಗಿ ಕಾರು ಹತ್ತಿ ಮನೆಯ ದಿಕ್ಕಿನತ್ತ ಪ್ರಯಾಣ ಬೆಳೆಸಿದರೂ ಬಹಳಷ್ಟು ಅಭಿಮಾನಿಗಳು ಬೇಸರಿಸಿಕೊಳ್ಳದೇ ಇಲ್ಲೇ ರೋಡಿನಲ್ಲಿ ಬಿಡುಗಡೆಯ ಸಂಭ್ರಾಮಾಚರಣೆಯನ್ನು ಕೇಕೆ, ಹಾಡು, ನೃತ್ಯಗಳ ಮೂಲಕ ಆಚರಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ನಿಂತು ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ.
ಸಿಕ್ಕಿರುವ ಮಾಹಿತಿಯಂತೆ ದರ್ಶನ್ ನೇರವಾಗಿ ಮನೆಗೆ ಹೋಗುವ ಬದಲು ಮನೆಯ ಹತ್ತಿರದಲ್ಲೇ ಇರುವ ರಾಜರಾಜೇಶ್ವರಿ ದೇವಾಲಯಕ್ಕೆ ತೆರಳಿ, ದೇವಿಯ ದರ್ಶನ ಪಡೆದು ನಂತರ ಮನೆಗೆ ತೆರಳಲಿದ್ದಾರೆ. ಅವರ ಮನೆಯ ಮುಂದೆ ಈಗಾಗಲೇ ಬಹಳಷ್ಟು ಅಭಿಮಾನಿಗಳು ಕೇಕ್ ಹಾಗೂ ಹೂವಿನಹಾರ ಹಿಡಿದು ಕಾಯುತ್ತಿದ್ದಾರೆ.
More from Filmibeat
English summary
Challenging Star Darshan Released from Parappana Agrahara Jail. He went towords his house which is in Rajarajeshwari Nagar.


Click it and Unblock the Notifications











