ದರ್ಶನ್ ಗೆ ತಪ್ಪಿನ ಅರಿವಾಗಿದೆ ಎಂದ ಸಹೋದರ ದಿನಕರ್

dinakar
ತನ್ನ ಸಹೋದರ ದರ್ಶನ್ ಷರತ್ತುಬದ್ಧ ಜಾಮೀನಿನ ಮೂಲಕ ಬಿಡುಗಡೆ ಆಗಲಿರುವ ಸುದ್ದಿ ತಿಳಿದು ದಿನಕರ್ ತುಂಬಾ ಖುಷಿಯಾಗಿದ್ದಾರೆ. ಅವರು ಮಾದ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ದರ್ಶನ್ ತಾನು ಮಾಡಿದ ತಪ್ಪನ್ನು ಅರಿತಿದ್ದಾರೆ ಮತ್ತು ತಿದ್ದಿಕೊಳ್ಳಲು ಮನಸ್ಸುಮಾಡಿದ್ದಾರೆ ಎಂದಿದ್ದಾರೆ.

ಎಲ್ಲರ ಸಂಸಾರದಲ್ಲೂ ಗಂಡ-ಹೆಂಡತಿಯರ ನಡುವೆ ವೈಮನಸ್ಯ, ಜಗಳ, ಕೋಪ-ತಾಪ ಇವೆಲ್ಲ ಸಹಜ ಹಾಗೂ ಸಾಮಾನ್ಯ. ಅದು ಸ್ವಲ್ಪ ಅತಿರೇಕಕ್ಕೆ ಹೋಗಿತ್ತಷ್ಟೇ. ಈಗ ಇಬ್ಬರಿಗೂ ಅವರವರ ತಪ್ಪಿನ ಅರಿವಾಗಿದೆ, ಮುಂದೆ ಯಾವುದೇ ಸಮಸ್ಯೆ ಆಗೊಲ್ಲ ಎಂದಿದ್ದಾರೆ.

ದರ್ಶನ್ ಜೈಲಿನಲ್ಲಿದ್ದಾಗಲೇ ತಮ್ಮ ನಿರ್ದೇಶನದ ಹಾಗೂ ದರ್ಶನ್ ಅಭಿನಯದ ಚಿತ್ರ 'ಸಾರಥಿ'ಯನ್ನು ತೆರೆಗೆ ತರಲೇಬೇಕಾದ ಅನಿವಾರ್ಯತೆ ಚಿತ್ರತಂಡಕ್ಕೆ ಇತ್ತು. ಹಾಗಾಗಿ ಅನಿವಾರ್ಯವಾಗಿ ಬಿಡುಗಡೆ ಮಾಡಿದ್ದೇವೆ. ಆದರೆ ದರ್ಶನ್ ಅಭಿಮಾನಿಗಳು ಅವರನ್ನು ಕ್ಷಮಿಸಿ ಸಾರಥಿ ಚಿತ್ರವನ್ನು ಯಶಸ್ವಿಗೊಳಿಸಿದ್ದಾರೆ.

ತಾವು ಈ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಹಾಗೂ ಎಲ್ಲರಿಗೂ ಕೃತಜ್ಞತೆ ಸೂಚಿಸುವುದಾಗಿ ಹೇಳಿದ ದಿನಕರ್, ದರ್ಶನ್ ಅವರ ಸಾರಥಿಗೆ ಇದೇ ಬೆಂಬಲ ಮುಂದುವರಿಸಿ ಹಾಗೂ ಮುಂದಿನ ಎಲ್ಲಾ ಚಿತ್ರಗಳಿಗೆ ನಿಮ್ಮೆಲ್ಲರ ಸಂಪೂರ್ಣ ಸಹಕಾರ ಇರಲಿ ಎಂದಿದ್ದಾರೆ.

More from Filmibeat

English summary
Darshan brother Dinakar told he is Happy for Darshan Release. After Darshan got Conditional Bail, he reacted that now Darshan understood his fault. He has changed his mind and understood his personal and social responsibility. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X