ಈ ಸಂಭಾಷಣೆ ಮೆಚ್ಚಿದ ಸೆನ್ಸಾರ್ ಮಂಡಳಿ
ಓಂ ಸಾಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಈ ಸಂಭಾಷಣೆ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು' ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಚಿತ್ರಕತೆ, ಚಿತ್ರೀಕರಣವಾದ ಸ್ಥಳಗಳಿಗೆ ಮಂಡಲಿಯಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಮಂಡಲಿಯ ತೀರ್ಪು ನಮಗೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ನಿರ್ಮಾಪಕರಾದ ಶ್ರೀನಿವಾಸ್‌ಪೂಜಾರ್ ಹಾಗೂ ಜ್ಯೋತಿಬಸವರಾಜ್.
ಶಿಸ್ತು, ಸಂಯಮಕ್ಕೆ ಹೆಸರಾದ ಮೇಜರ್ ಶ್ರೀನಿವಾಸ ಪೂಜಾರ್ ತಮ್ಮ ಮಗ ಸಂದೇಶನಿಗಾಗಿ ನಿರ್ಮಿಸಿರುವ ಈ ಚಿತ್ರವನ್ನು ರಾಜಶೇಖರ್ ಅವರು ಪ್ರಥಮ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ವಿ.ಮನೋಹರ್ ಸಂಗೀತ, ಸುರೇಶ್‌ಅರಸ್ ಸಂಕಲನ, ಮಂಜು ಮಾಂಡವ್ಯ ಸಂಭಾಷಣೆ, ಕೌರವ ವೆಂಕಟೇಶ್ ಸಾಹಸ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್, ಹರ್ಷ, ರಘು ನೃತ್ಯ, ಎಸ್.ಎಸ್.ಚಂದ್ರಶೇಖರ್ ನಿರ್ಮಾಣನಿರ್ವಹಣೆ.
ಭಾಸ್ಕರ್ ನಿರ್ಮಾಣ ಮೇಲ್ವಿಚಾರಣೆ, ದೊಡ್ಡರಂಗೇಗೌಡ, ವಿ.ಮನೋಹರ್, ಜಯಂತಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಗೀತರಚನೆಯಿರುವ ಚಿತ್ರದ ತಾರಾಬಳಗದಲ್ಲಿ ಸಂದೇಶ್, ಹರಿಪ್ರಿಯ, ಜ್ಯೋತಿರಾಣಾ ಮುಂತಾದವರು ಸೇರಿದಂತೆ ಶರಣ್, ಸುಮಲತಾ ಅಂಬರೀಶ್,ಬಿ.ಗಣಪತಿ, ಬುಲೆಟ್ ಪ್ರಕಾಶ್, ವಿ.ಮನೋಹರ್ ಇದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
ಕನ್ನಡ ಸಿನಿಮಾ kannada movies ಜಯಂತ್ ಕಾಯ್ಕಿಣಿ jayanth kaikini ಈ ಸಂಭಾಷಣೆ ಶ್ರೀನಿವಾಸ ಪೂಜಾರ್ ಸಂದೇಸ್ ಸೆನ್ಸಾರ್ e sambashane srinivas poojar sandesh regional censor board


Click it and Unblock the Notifications












