ಹ್ಯಾಟ್ರಿಕ್ ಹೀರೋ ಅಭಿಮಾನಿ ದೇವರು ಅಜಯ್ ರಾವ್
ಶಿವಣ್ಣನಿಂಗೆ ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೇ ಫ್ಯಾನ್‌ಗಳಿದ್ದಾರೆ. ಉಪೇಂದ್ರನಿಂದ ಹಿಡಿದು, ತೀರಾ ಇತ್ತೀಚಿನ ಹುಡುಗರೂ ಅವರನ್ನು ಇಷ್ಟಪಡುತ್ತಾರೆ. ಅವರ ಅಭಿನಯವನ್ನು ಆರಾಧಿಸುತ್ತಾರೆ. ಅದೇ ಸಾಲಿಗೆ ಸೇರುವ ವ್ಯಕ್ತಿ ನಟ ಅಜಯ್‌ರಾವ್. ಅವರು ಶಿವಣ್ಣನನ್ನು ಎಷ್ಟು ಇಷ್ಟಪಡುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಪುಟ್ಟದೊಂದು ಎಕ್ಸಾಂಪಲ್..
ಮೊನ್ನೆ ಮೊನ್ನೆಯಷ್ಟೇ ಅರಮನೆ ಮೈದಾನದಲ್ಲಿ ನಡೆದ ಶಿವರಾಜ್‌ಕುಮಾರ್ ವಿಶೇಷ ಕಾರ್ಯಕ್ರಮ "ಮಹಾಶಿವರಾತ್ರಿ"ಯಲ್ಲಿ ಉದ್ಯಮದ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು. ಶಿವಣ್ಣನ ಜನಪ್ರಿಯ ಹಾಡುಗಳಿಗೆ ಒಂದಷ್ಟು ಹುಡುಗರು ಹೆಜ್ಜೆ ಹಾಕಿದರು. ಅವರಲ್ಲಿ ಅಜಯ್ ರಾವ್ ಕೂಡ ಒಬ್ಬರು. ಅವರು ಶಿವಣ್ಣನ ಹಾಡಿನಲ್ಲಿ ಅದೆಷ್ಟು ತಲ್ಲೀನರಾಗಿದ್ದರು ಎಂದರೆ, ಬೆಳಗ್ಗೆಯಿಂದ ನಡೆದ ತಾಲೀಮಿನಲ್ಲಿ ಒಂದು ತುತ್ತು ಅನ್ನವನ್ನೂ ತಿನ್ನದೇ ಇದ್ದರು. ಶಿವಣ್ಣನ ಹಾಡಿಗೆ ಹೆಜ್ಜೆ ಹಾಕುವಲ್ಲಿ ತಲ್ಲೀನರಾದ ಅಜಯ್ ಅವರಿಗೆ ಹಸಿವಿನ ನೆನಪೇ ಆಗಲಿಲ್ಲ!
ಕೊನೆಗೆ ಏನಾಯಿತು ಗೊತ್ತಾ? ಸಂಜೆ ಆಗುತ್ತಿದ್ದಂತೇ ಅಜಯ್ ಅವರಿಗೆ ಸಣ್ಣ ಪ್ರಮಾಣದ ಸುಸ್ತು ಕಾಣಿಸಿಕೊಂಡಿದೆ. ಒಂದು ಕಡೆ ತಲೆ ಕೂಡ ಸುತ್ತಿದೆ. ಇನ್ನೇನು ಅವರು ಬೀಳುತ್ತಾರೆ ಎನ್ನುವ ಹೊತ್ತಿಗೆ ಅಲ್ಲಿದ್ದ ಒಂದಷ್ಟು ಗೆಳೆಯರು ಅವರನ್ನು ಕರೆದೊಯ್ದು, ಎರಡು ಇಡ್ಲಿ ಕೊಡಿಸಿ, ಸಮಾಧಾನ ಮಾಡಿದ್ದಾರೆ! ಇದು ನಿಜವಾದ ಪ್ರೀತಿ... ಏನಂತೀರಿ ನೀವು?!


Click it and Unblock the Notifications











