»   » ದೇಸಾಯಿ ಚಿತ್ರಕ್ಕೆ ಇಳಯರಾಜ ಸರಿಗಮ

ದೇಸಾಯಿ ಚಿತ್ರಕ್ಕೆ ಇಳಯರಾಜ ಸರಿಗಮ

Subscribe to Filmibeat Kannada
sunil kumar desai
"ಕ್ಷಣ ಕ್ಷಣ" ಚಿತ್ರದ ಸೋಲಿನಿಂದ ಕ್ಷಣ ಕಾಲ ದೂರಸರಿದಿದ್ದ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ದೇಸಾಯಿ ನಿರ್ದೇಶನದ ಹೊಸ ಚಿತ್ರ "ಸರಿಗಮ". ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿಯನ್ನು ದೇಸಾಯಿ ಅವರೇ ವಹಿಸಿಕಕೊಂಡಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಇಳಯರಾಜ ಅವರ ಸಂಗೀತ. ಇಳಯರಾಜ ಅವರು ಸಂಗೀತ ನೀಡುವುದಕ್ಕೆ ಲಕ್ಷಗಟ್ಟಲೆ ಹಣ ಕೇಳುತ್ತಾರೆ ಎಂಬ ವರದಿಗಳ ನಡುವೆಯೂ ಅವರು ಕನ್ನಡ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಆಶ್ಚರ್ಯವನ್ನೇ ಉಂಟುಮಾಡುತ್ತದೆ.

ಪ್ರಜ್ವಲ್ ದೇವರಾಜ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಆಗಬೇಕಷ್ಟೆ. ಮೂಲಗಳ ಪ್ರಕಾರ ಆಕೆ ಕನ್ನಡದ ಖ್ಯಾತ ನಿರ್ದೇಶಕರೊಬ್ಬರ ಮಗಳ೦ತೆ. ಎಕ್ಸ್ಕ್ಯೂಸ್ ಮಿ ಚಿತ್ರದ ಸುನಿಲ್ ರಾವ್ ಈ ಚಿತ್ರದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದೆ ದೇವರಾಜ್ ಅಭಿನಯದ "ತರ್ಕ" ದೇಸಾಯಿಯವರಿಗೆ ಹೆಸರು ತಂದು ಕೊಟ್ಟಿತು. ಈಗ ಅವರ ಮಗ ಪ್ರಜ್ವಲ್ ದೇವರಾಜ್ ಸರದಿ. ದೇಸಾಯಿಯವರ ಈ ಚಿತ್ರ ಕನ್ನಡಕ್ಕೆ ಮತ್ತೊಂದು "ನಿಷ್ಕರ್ಷ" ಅಥವಾ "ನಮ್ಮೂರ ಮಂದಾರ ಹೊವೇ" ಆಗಲಿ ಎನ್ನುವುದೇ ಕನ್ನಡ ಚಿತ್ರಪ್ರೇಮಿಗಳ ಆಶಯ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada