ಕನ್ನಡದಲ್ಲಿ ಇಲಿಯಾನಾ ಸಂಭಾವನೆ ಎಷ್ಟು ಗೊತ್ತೆ?
'ಹುಡುಗ ಹುಡುಗಿ' ಚಿತ್ರದ ಮೂಲಕ ತೆಲುಗು ಸಿನಿಮಾ ತಾರೆ ಇಲಿಯಾನಾ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಚಿತ್ರದ ಹಾಡೊಂದರಲ್ಲಿ ಕುಣಿದಿರುವ ಅವರು ಧ್ಯಾನ್ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವರು ಇಂದ್ರಜಿತ್ ಲಂಕೇಶ್.
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಲೇಖಾ ವಾಷಿಂಗ್ಟನ್ ಸಹ ಅಭಿನಯಿಸಿರುವುದು ಈ ಚಿತ್ರದ ಮತ್ತೊಂದು ವಿಶೇಷ.ಇಲಿಯಾನಾ ಅಭಿನಯಿಸಿರುವ ಹಾಡು ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್. ನಟಿ ಸದಾ ಸಹ ಚಿತ್ರದ ಪಾತ್ರವರ್ಗದಲ್ಲಿದ್ದಾರೆ.
ಒಂದೆರಡು ದಿನಗಳ ಕಾಲ ನಡೆಯಬೇಕಿದ್ದ ಹಾಡಿನ ಚಿತ್ರೀಕರಣವನ್ನು ಇಲಿಯಾನಾ 10 ದಿನಗಳ ಕಾಲ ತೆಗೆದುಕೊಂಡರು. ಇದರ ಪರಿಣಾಮ ಜೇಬಿಗೆ ಕತ್ತರಿ. ಹತ್ತು ದಿನಕ್ಕೆ ಆಕೆಯ ಸಂಭಾವನೆ ರು.30 ಲಕ್ಷವಾಗಿದೆ. ಉಳಿದಂತೆ ಆಕೆಯ ವಿಂಡ್ಸರ್ ಮ್ಯಾನರ್ ಹೋಟೆಲ್ ಬಿಲ್ ರು.18 ಲಕ್ಷಗಳಾಗಿವೆ ಎನ್ನುತ್ತಾರೆ ನಿರ್ಮಾಪರು. ಪರಭಾಷಾ ನಟಿಯರಿಗೆ ಇಷ್ಟೆಲ್ಲಾ ಕೊಟ್ಟು ಕುಣಿಸುವ ಅಗತ್ಯವಾದರು ಏನಿತ್ತು? ಎಂಬ ಪ್ರಶ್ನೆ ಉದ್ಭವಿಸಿದೆ.


Click it and Unblock the Notifications











