»   » ನವರಸ ನಾಯಕನ ಜತೆ ಶ್ರದ್ಧಾ ತಪಾಂಗುಚಿ ಸಾಂಗ್!

ನವರಸ ನಾಯಕನ ಜತೆ ಶ್ರದ್ಧಾ ತಪಾಂಗುಚಿ ಸಾಂಗ್!

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರ ಹೊಚ್ಚ ಹೊಸ ಚಿತ್ರ 'ಡಬಲ್ ಡೆಕ್ಕರ್' ಹಾಡಿನ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ನಡೆಯಿತು. ಜಗ್ಗೇಶ್ ಜತೆ ಶ್ರದ್ಧಾ ಆರ್ಯ ಹೆಜ್ಜೆ ಹಾಕಿದರು. ವಿಕ್ಟರಿ ವಾಸು ಆಕ್ಷನ್,ಕಟ್ ಹೇಳುತ್ತಿರುವ ಚಿತ್ರ ಇದಾಗಿದೆ.

ಅದಿತಿ ಗೌತಮ್ ಚಿತ್ರದ ಎರಡನೇ ನಾಯಕಿ. ಕವಿರಾಜ್ ರಚಿಸಿದ ಜಿಂಗ್ ಚಾಕ್ ಹಾಡಿಗೆ ದಿಲೀಪ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಜಗ್ಗೇಶ್ ಜತೆ ಕುಣಿದಿದ್ದು ಸಖತ್ ಖುಷಿಯಾಗಿದೆ ಎಂದು ಶ್ರದ್ಧಾ ಆರ್ಯ ಪ್ರತಿಕ್ರಿಯಿಸಿದ್ದಾರೆ. ಈ ಹಾಡಿಗೆ ಜಯಪಾಲ್ ಸಂಗೀತ ಸಂಯೋಜಿಸಿದ್ದಾರೆ.

ಈ ಸಂದರ್ಭದಲ್ಲಿ ಜಗ್ಗೇಶ್ ಮಾತನಾಡುತ್ತಾ, ರೊಮ್ಯಾಂಟಿಕ್ ಹಾಡಿಗಿಂತಲೂ ತಪಾಂಗುಚಿ ಹಾಡಿನಲ್ಲಿ ಕುಣಿಯುವುದೇ ಒಂದು ಆನಂದ ಕಣ್ರಿ ಎಂದಿದ್ದಾರೆ. ಮದುವೆಯಾದ ಪುರುಷನೊಬ್ಬನ ಹಿಂದೆ ಇಬ್ಬರು ಮಹಿಳೆಯರು ಬೀಳುವ ಕಥಾಹಂದರ 'ಡಬಲ್ ಡೆಕ್ಕರ್' ಚಿತ್ರಕ್ಕಿದೆ.

English summary
A beautiful song featuring Jaggesh and Shradhdha Arya was picturised in Bangalore recently for the movie Double Decker. The movie is directing by Victory Vasu. Aditi Gauthami plays the second female lead in the movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada