ತಮಿಳಿನಲ್ಲಿ ಜಾಕ್‌ಪಾಟ್ ಹೊಡೆದ ಪೊರ್ಕಿ ಪ್ರಣೀತಾ

By Rajendra

ತೆಲುಗು ಚಿತ್ರರಂಗದಲ್ಲಿ ಒಂದು ಸುತ್ತ್ತು ಹಾಕಿಕೊಂಡು ಬಂದಿರುವ ಪ್ರಣೀತಾಗೆ ಯಾಕೋ ಅದೃಷ್ಟ ಎರಡು ಬಾರಿ ಕೈಕೊಡ್ತು. ತೆಲುಗಿನ ಏಮ್ ಪಿಲ್ಲೊ ಏಮ್ ಪಿಲ್ಲಾಡೋ (ಏನೋ ಹುಡುಗಿನೋ ಏನ್ ಹುಡಗಾನೋ) ಚಿತ್ರ ನೆಲಕಚ್ಚಿತ್ತು. ಬಳಿಕ ಆಕೆಯ ಎರಡನೆ ಚಿತ್ರ 'ಭಾವ' ಕೂಡ ತಾಚಿಕೊಂಡಿತು.

ಈಗ ತಮಿಳಿನತ್ತ ಮುಖ ಮಾಡಿರುವ ಆಕೆಗೆ ಅದೃಷ್ಟ ಬಾಗಿಲು ತೆರೆದಿದೆ. ಕಾರ್ತಿ ಮುಖ್ಯಭೂಮಿಕೆಯಲ್ಲಿರುವ 'ಶಕುನಿ' ಚಿತ್ರದಲ್ಲಿ ಚಾನ್ಸ್ ಸಿಕ್ಕಿದೆ. ಇದೊಂದು ದ್ವಿಭಾಷಾ ಚಿತ್ರವಾಗಿದ್ದು ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ.

ಕಾರ್ತಿ ಚಿತ್ರಗಳು ಇದುವರೆಗೂ ತಮಿಳು ಬಾಕ್ಸಾಫೀಸಲ್ಲಿ ತಾಚಿಕೊಂಡ ಉದಾಹರಣೆಗಳು ಇಲ್ಲ. 'ಶಕುನಿ' ಚಿತ್ರ ಸಕ್ಸಸ್ ಆದರೆ ಅತ್ತ ತೆಲುಗು ಇತ್ತ ತಮಿಳಿನಲ್ಲಿ ಪ್ರಣೀತಾ ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯಲಿದ್ದಾರೆ. ಇಲ್ಲಾ ಅಂದ್ರೆ ಹೇಗೂ ಕನ್ನಡ ಚಿತ್ರರಂಗದ ಬಾಗಿಲು ತೆರೆದೇ ಇದೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Kannada actress Panitha is now busy in Telugu and Tamil. Her debut Telugu film Em Pillo Em Pillado not doing well at boxoffice. Also her second film in Telugu, Bava was a big dud. Now she got a chance in Karthi's Shakuni. This is a bilingual film simultaneous release in Telugu and Tamil.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X