'ಅಡ್ಡ' ದಾರಿ ಹಿಡಿದಿದ್ದಾರೆ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್

ವಿಜಯದಶಮಿ ಹಾಗೂ ಆಯುಧಪೂಜೆ ಹಬ್ಬದ ಶುಭಾಶಯ ಕೋರಿ ಇದೀಗ ಚಿತ್ರೀಕರಣ ಪ್ರಾರಂಭ ಎಂದು ಘೋಷಿಸಿದೆ ಚಿತ್ರತಂಡ. ಆದರೆ ಡೈರೆಕ್ಟರ್ ಪ್ರೇಮ್ ಅಭಿನಯವನ್ನು ಮಾತ್ರ ಈ ಚಿತ್ರದಲ್ಲಿ ಕಾಣಬಹುದಾಗಿದೆ, ನಿರ್ದೇಶನವಿಲ್ಲ. ನಿರ್ದೇಶಕನನ್ನೇ ನಿರ್ದೇಶಿಸಲು ಹೊರಟಿರುವ ಮಹೇಶ್ ಬಾಬುಗೆ ಗಂಡೆದೆಯನ್ನು ಹಾಗೂ ಅಡ್ಡದ ದಾರಿ ಹಿಡಿದಿರುವ ಪ್ರೇಮ್ ಗುಂಡಿಗೆಯನ್ನು ಮೆಚ್ಚಲೇಬೇಕು.
"ಎ ವಯೋಲೆಂಟ್ ಲವ್ ಸ್ಟೋರಿ ಇನ್..." ಎಂಬ ತಲೆಬರಹದೊಂದಿಗೆ ಆಕರ್ಷಕ ಶೀರ್ಷಿಕೆ ಹೊಂದಿರುವ 'ಅಡ್ಡ', ಪ್ರೇಕ್ಷಕರನ್ನು ತಮ್ಮ 'ಅಡ್ಡ' ಬಿಟ್ಟು ಬರುವಂತೆ ಮಾಡಲಿ ಎಂಬುದು ಎಲ್ಲರ ಹಾರೈಕೆ. ಒಬ್ಬ ನಿರ್ದೇಶಕನನ್ನೇ ನಟನನ್ನಾಗಿ ಮಾಡಿಕೊಂಡಿರುವ ಇನ್ನೊಬ್ಬ ನಿರ್ದೇಶಕರು ಯಾವ ಮಟ್ಟಿಗೆ ಈ ಪ್ರಯೋಗದಲ್ಲಿ ಯಶಸ್ವಿಯಾಗಿ ಚಿತ್ರವನ್ನು ಪ್ರೇಕ್ಷಕರ ಮುಂದಿಡುತ್ತಾರೆ ಎಂಬುದನ್ನು ಕಾದು ನೋಡೋಣ!
'ಮೆಕಾ ಫಿಲಂಸ್' ಅರ್ಪಿಸುವ ಈ ಚಿತ್ರದ ಸಂಗೀತ ಟಾಪ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೈಸೇರಿದೆ. ಮುರಳಿ ಕೃಷ್ಣ ಕ್ಯಾಮೆರಾ ಕೈಚಳಕದಲ್ಲಿ ಅಡ್ಡ, ರೂಪ ಪಡೆಯಲಿದೆ. ಉಳಿದ ತಾರಾಬಳಗ, ಬಿಡುಗಡೆ ವಿಷಯಗಳ ಮಾಹಿತಿ ಸದ್ಯಕ್ಕಿಲ್ಲ.


Click it and Unblock the Notifications











