twitter
    For Quick Alerts
    ALLOW NOTIFICATIONS  
    For Daily Alerts

    'ಅಡ್ಡ' ದಾರಿ ಹಿಡಿದಿದ್ದಾರೆ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್

    |

    prem
    "ಜೋಗಯ್ಯ" ಚಿತ್ರವನ್ನು ಅದೇಕೋ ಪ್ರೇಕ್ಷಕರು "ಹೋಗಯ್ಯ" ಎಂದುಬಿಟ್ಟಿದ್ದಾರೆ. ಅದು ಚಿತ್ರಕ್ಕೆ ಮಾತ್ರ ಎಂದು ಅರಿತಿರುವ ನಿರ್ದೇಶಕ ಪ್ರೇಮ್ ಈಗ ತಮ್ಮ ಸಿನಿಮಾ ಯಾತ್ರೆಯಲ್ಲಿ "ಅಡ್ಡ" ದಾರಿ ಹಿಡಿಯಲು ಹೊರಟಿದ್ದಾರೆ. ಹ್ಯಾಟ್ರಿಕ್ ನಿರ್ದೇಶಕರನ್ನು ನಟನೆಗೆ ತಳ್ಳಿ(!) ಅಡ್ಡದಾರಿಗೆ ಹಿಡಿಸಲಿದ್ದಾರೆ ನಿರ್ದೇಶಕ ಮಹೇಶ್ ಬಾಬು. ಆದರೆ ಜೋಗಯ್ಯ ಸೋಲಿನಿಂದ ಅಡ್ಡ (ಮನೆ) ದಾರಿ ಹಿಡಿಯದೇ 'ಅಡ್ಡ' ಸಿನಿಮಾ ಮಾಡಲಿರುವುದು ಅವರ ಅಭಿಮಾನಿಗಳಿಗೆ ಖುಷಿ ತಂದಿರಬಹುದು.

    ವಿಜಯದಶಮಿ ಹಾಗೂ ಆಯುಧಪೂಜೆ ಹಬ್ಬದ ಶುಭಾಶಯ ಕೋರಿ ಇದೀಗ ಚಿತ್ರೀಕರಣ ಪ್ರಾರಂಭ ಎಂದು ಘೋಷಿಸಿದೆ ಚಿತ್ರತಂಡ. ಆದರೆ ಡೈರೆಕ್ಟರ್ ಪ್ರೇಮ್ ಅಭಿನಯವನ್ನು ಮಾತ್ರ ಈ ಚಿತ್ರದಲ್ಲಿ ಕಾಣಬಹುದಾಗಿದೆ, ನಿರ್ದೇಶನವಿಲ್ಲ. ನಿರ್ದೇಶಕನನ್ನೇ ನಿರ್ದೇಶಿಸಲು ಹೊರಟಿರುವ ಮಹೇಶ್ ಬಾಬುಗೆ ಗಂಡೆದೆಯನ್ನು ಹಾಗೂ ಅಡ್ಡದ ದಾರಿ ಹಿಡಿದಿರುವ ಪ್ರೇಮ್ ಗುಂಡಿಗೆಯನ್ನು ಮೆಚ್ಚಲೇಬೇಕು.

    "ಎ ವಯೋಲೆಂಟ್ ಲವ್ ಸ್ಟೋರಿ ಇನ್..." ಎಂಬ ತಲೆಬರಹದೊಂದಿಗೆ ಆಕರ್ಷಕ ಶೀರ್ಷಿಕೆ ಹೊಂದಿರುವ 'ಅಡ್ಡ', ಪ್ರೇಕ್ಷಕರನ್ನು ತಮ್ಮ 'ಅಡ್ಡ' ಬಿಟ್ಟು ಬರುವಂತೆ ಮಾಡಲಿ ಎಂಬುದು ಎಲ್ಲರ ಹಾರೈಕೆ. ಒಬ್ಬ ನಿರ್ದೇಶಕನನ್ನೇ ನಟನನ್ನಾಗಿ ಮಾಡಿಕೊಂಡಿರುವ ಇನ್ನೊಬ್ಬ ನಿರ್ದೇಶಕರು ಯಾವ ಮಟ್ಟಿಗೆ ಈ ಪ್ರಯೋಗದಲ್ಲಿ ಯಶಸ್ವಿಯಾಗಿ ಚಿತ್ರವನ್ನು ಪ್ರೇಕ್ಷಕರ ಮುಂದಿಡುತ್ತಾರೆ ಎಂಬುದನ್ನು ಕಾದು ನೋಡೋಣ!

    'ಮೆಕಾ ಫಿಲಂಸ್' ಅರ್ಪಿಸುವ ಈ ಚಿತ್ರದ ಸಂಗೀತ ಟಾಪ್ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಕೈಸೇರಿದೆ. ಮುರಳಿ ಕೃಷ್ಣ ಕ್ಯಾಮೆರಾ ಕೈಚಳಕದಲ್ಲಿ ಅಡ್ಡ, ರೂಪ ಪಡೆಯಲಿದೆ. ಉಳಿದ ತಾರಾಬಳಗ, ಬಿಡುಗಡೆ ವಿಷಯಗಳ ಮಾಹಿತಿ ಸದ್ಯಕ್ಕಿಲ್ಲ.

    English summary
    Hat-trick Director Prem acts in new Movie Adda. Prem is only acting in this and not Directing. Mahesh Babu directs for this movie. This is really a big news for his fans.
 
    Friday, October 7, 2011, 11:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X