twitter
    For Quick Alerts
    ALLOW NOTIFICATIONS  
    For Daily Alerts

    ಗಿನ್ನೆಸ್ ದಾಖಲೆ ಬರೆದ ಥ್ರಿಲ್ಲರ್ ಮಂಜುಗೆ ಸಲ್ಯೂಟ್

    By Rajendra
    |

    ತನ್ನ ಸಿನಿಮಾ ವೃತ್ತಿ ಜೀವನದ 25 ವರ್ಷಗಳ ಸಂಭ್ರಮದಲ್ಲಿ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಉಸ್ತುವಾರಿಯ "ಪೋಲಿಸ್ ಸ್ಟೋರಿ 3" ಚಿತ್ರ ಗಿನ್ನೆಸ್ ದಾಖಲೆಯತ್ತ ಹೆಜ್ಜೆ ಇಟ್ಟಿದ್ದು ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನಗಿಟ್ಟಿಸಿದಿದೆ . ಈ ಚಿತ್ರ ಶುಕ್ರವಾರ (ಜು .8)ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಕೇವಲ 12 ಗಂಟೆ ಸಮಯದಲ್ಲಿ ಚಿತ್ರೀಕರಣ ಮುಗಿಸಿ ಹೊಸ ದಾಖಲೆ ಬರೆದಿರುವುದು ಚಿತ್ರದ ವಿಶೇಷ.

    ಆರು ನಿರ್ದೇಶಕರು, ಆರು ಛಾಯಾಗ್ರಾಹಕರು ಮತ್ತು ಆರು ಸಾಹಸ ನಿರ್ದೇಶಕರು ಒಟ್ಟಾಗಿ ಚಿತ್ರದ ಶೂಟಿಂಗ್ ಅನ್ನು 12 ಗಂಟೆಯಲ್ಲಿ ಮುಗಿಸಿದ್ದಾರೆ. ಅಲ್ಲದೆ 10 ದಿನ 14 ಗಂಟೆಗಳಲ್ಲಿ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. 11 ದಿನಗಳಲ್ಲಿ ಸೆನ್ಸಾರ್ ಬೋರ್ಡ್ ನಿಂದ U/A ಸರ್ಟಿಫಿಕೆಟ್ ಪಡೆದ ವಿಶ್ವದ ಮೊದಲ ಹೆಮ್ಮೆಯ ಕನ್ನಡಿಗರ ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಜೂನ್ 6, 2011 ರಂದು ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ಸತತವಾಗಿ ಚಿತ್ರೀಕರಣ ನಡೆದಿತ್ತು. ಥ್ರಿಲ್ಲರ್ ಮಂಜು ಅವರ ಈ ಸಾಹಸಕ್ಕೆ ಸುಮಾರು 600 ಮಂದಿ ಕಲಾವಿದರು ಸಾಥ್ ನೀಡಿದ್ದರು. ಥ್ರಿಲ್ಲರ್ ಮಂಜು, ಸಾಧು ಕೋಕಿಲ, ವಾಸು, ಜೆ ಜಿ ಕೃಷ್ಣ, ಆನಂದ್ ಪಿ ರಾಜು ಮತ್ತು ಶಂಕರ್ ಚಿತ್ರದ ನಿರ್ದೇಶಕರು. ಶಿವಾನಂದ ಮಾದಸೆಟ್ಟಿ ನಿರ್ಮಿಸುತ್ತಿರುವ ಚಿತ್ರಕ್ಕೆ ಸಾಗರ್ ಸಂಗೀತ ನೀಡಿದ್ದಾರೆ.

    ಚಿತ್ರದ ಮುಖ್ಯ ಭೂಮಿಕೆಯಲ್ಲಿ ಸುದೀಪ್, ಸಂದೀಪ್, ನೇಹಾ ಪಾಟೀಲ್, ಬುಲೆಟ್ ಪ್ರಕಾಶ್, ಸಾಧು ಕೋಕಿಲ ಮುಂತಾದವರಿದ್ದಾರೆ. ಈ ಚಿತ್ರ ರಾಜ್ಯಾದ್ಯಂತ 65 ಚಿತ್ರಮಂದಿರಗಳಲ್ಲಿ ಬಿಡುಗಡೆ ಗೊಳ್ಳಲಿದೆ. ಈ ಹೊಸ ಪ್ರಯತ್ನದ ಚಿತ್ರಕ್ಕೆ ಶ್ರಮಿಸಿದ ಎಲ್ಲಾ ಕಲಾವಿದರು, ತಂತ್ರಜ್ಞರ ಶ್ರಮ ಸಾರರ್ಥಕವಾಗಲಿ ಎಂದು ಬಯಸುವ.(ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Thriller Manju and five others directed Kannada movie Police Story 3 releasing on 8th July all over Karnataka. Sudeep plays the role of a police officer in the film. The film was shot in a record time between 6 a.m. and 6 p.m. at the famed Banglore Palace.
    Thursday, July 7, 2011, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X