ಕನ್ನಡ ಚಿತ್ರರಂಗಕ್ಕೆ 'ಮಗಧೀರ' ವಿಲನ್ ದೇವ್ ಗಿಲ್

By Rajendra

ತೆಲುಗು ಚಿತ್ರರಂಗದಲ್ಲಿ ವಿಲನ್ ಆಗಿ ಗುರುತಿಸಿಕೊಂಡ ಸ್ಫುರದ್ರೂಪಿ ನಟ ದೇವ್ ಗಿಲ್ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಕೋಟಿ ನಿರ್ಮಾಪಕ ರಾಮು ನಿರ್ಮಿಸುತ್ತಿರುವ 'ಸಾಗರ್' ಚಿತ್ರದಲ್ಲಿ ಅವರು ಪ್ರಮುಖ ಪಾತ್ರ ಪೋಷಿಸಿದ್ದಾರೆ. ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್. 'ಸಾಗರ್' ಚಿತ್ರದ ಅಡಿಬರಹ ಹೀಗಿದೆ "A liar boy".

ಲವ್ವು ಡವ್ವು, ಮದುವೆ,ಪ್ರೀತಿ, ಪ್ರೇಮ...ಹೀಗೆ ಕತೆ ವಿವಿಧ ಅಂಶಗಳ ಸುತ್ತ ಸುತ್ತುತ್ತದೆ. ಆಕ್ಷನ್ ಕಟ್ ಹೇಳುತ್ತಿರುವವರು ಎಂಡಿ ಶ್ರೀಧರ್. ಬಿ ಎ ಮಧು ಅವರ ಸಂಭಾಷಣೆ ಚಿತ್ರಕ್ಕಿದೆ. ಕೊಂಚ ಗ್ಯಾಪ್‌ನ ಬಳಿಕ ಆದಿ ಲೋಕಶ್ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸ್ವಯಂವರ ಚಂದ್ರು ಅವರದು ಕಾಮಿಡಿ ಪಾತ್ರ ಪೋಷಿಸಿದ್ದಾರೆ.

ಸಾಗರ್ ಚಿತ್ರಕ್ಕೆ ಮೂವರು ನಾಯಕಿಯರು. ರಾಧಿಕಾ ಪಂಡಿತ್, ಸಂಜನಾ ಹಾಗೂ ಹರಿಪ್ರಿಯಾ. ತೆಲುಗಿನ ಭಾರಿ ಬಜೆಟ್ ಚಿತ್ರದ ಮಗಧೀರ ಚಿತ್ರದಲ್ಲಿ ದೇವ್ ಖಳನಟನಾಗಿ ಮಿಂಚಿದ್ದ. ಅದಾದ ಬಳಿಕ ಆತನ ಕೈಗೆ ಒಂದೇ ಒಂದು ಅವಕಾಶವೂ ಸಿಗಲಿಲ್ಲ. ಮಗಧೀರ ಬಳಿಕ ದೇವ್‍ಗೆ ಸಿಗುತ್ತಿರುವ ಎರಡನೇ ಆಫರ್ ಇದು. (ದಟ್ಸ್‌‍ಕನ್ನಡ ಸಿನಿವಾರ್ತೆ)

More from Filmibeat

English summary
Telugu black buster movie Magadheera villain Dev Gill of steps into Kannada film Sagar. He is playing key tormentor in this film says t is a lovely film that would definitely leave a mark said Gill.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X