ವಿಷ್ಣುವರ್ಧನ ರೀಲೀಸ್ ಗೆ ದ್ವಾರಕೀಶ್ ಕೇವಿಯಟ್

Sudeep Bhavana
ನಾಳೆ, ಡಿಸೆಂಬರ್ 08, 2011 ರಂದು ರಾಜ್ಯಾದ್ಯಂತ ತೆರೆಕಾಣಲಿರುವ 'ವಿಷ್ಣುವರ್ಧನ' ಚಿತ್ರಕ್ಕೆ ಆತಂಕ ಎದುರಾಗಿದೆ. ಕಾರಣ ಈ ಚಿತ್ರದ ಮುಹೂರ್ತದ ವೇಳೆಯಲ್ಲೇ ಶೀರ್ಷಿಕೆ ವಿಷಯಕ್ಕೆ ಸಂಬಂಧಿಸಿದಂತೆ ದಿವಂಗತ ವಿಷ್ಣುವರ್ಧನ್ ಪತ್ನಿ, ನಟಿ ಭಾರತಿ ವಿಷ್ಣುವರ್ಧನ್ ವಿರೋಧ ವ್ಯಕ್ತಪಡಿಸಿದ್ದರು. ಹಾಗಾಗಿ ಭಾರತಿಯವರು ತಡೆ ತರುವ ಸಾಧ್ಯತೆ ಇದೆ ಎಂಬುದು ದ್ವಾರಕೀಶ್ ಯೋಚನೆ.

ಇದೀಗ ನಾಳೆ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಚಿತ್ರದ ನಿರ್ಮಾಪಕ, ನಟ ದ್ವಾರಕೀಶ್ ಹೈಕೋರ್ಟ್ ಗೆ ಕೆವಿಯೆಟ್ ಸಲ್ಲಿಸಿದ್ದಾರೆ. ಬಿಡುಗಡೆಗೆ ತೊಂದರೆಯಾಗದಿರಲಿ ಎಂಬ ಮುನ್ನೆಚ್ಚರಿಕೆಯಿಂದ ದ್ವಾರಕೀಶ್ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇಂದು ಹೈಕೋರ್ಟ್ ನಲ್ಲಿ ಕೇವಿಯಟ್ ಅರ್ಜಿ ಸಲ್ಲಿಸಿರುವ ದ್ವಾರಕೀಶ್, ಇನ್ನೇನನ್ನೂ ಹೇಳಿಲ್ಲ. ಟೈಟಲ್ ವಿವಾದ ಆಗಿತ್ತಾದ್ದರಿಂದ ಮುನ್ನಚ್ಚರಿಕೆ ಕ್ರಮವಾಗಿ ಕೇವಿಯಟ್ ಸಲ್ಲಿಸಲಾಗಿದೆ ಎಂದಿದ್ದಾರೆ. ಇದೀಗ ವಿಷ್ಣುವರ್ಧನ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಿಗ್ಗೆ ತೆರೆಯ ಮೇಲೆ ವಿಷ್ಣುವರ್ಧನ ಬರಲಿದ್ದಾರೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Dwarakish is not taking any chances with his much controversial film Only Vishnuvardhana, Sudeep in lead role slated to release on December 8. And to avoid more problems, Dwarakish filed a caveat in the court to avoid stay on the release of his film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X