ತರ್ಲೆ ನನ್ ಮಕ್ಳು ಚಿತ್ರಕ್ಕೆ ಕೈಹಾಕಿದ ನಾಗಶೇಖರ್
ಕನ್ನಡ ಚಿತ್ರರಂಗದ ಮಟ್ಟಿಗೆ 'ತರ್ಲೆ ನನ್ ಮಗ' ಚಿತ್ರ ವಿಭಿನ್ನ ಪ್ರಯತ್ನ ಎಂದೇ ಹೇಳಬೇಕು. ಕಾರಣ ಈ ಚಿತ್ರ ಉಪೇಂದ್ರ ನಿರ್ದೇಶಕರಾಗಿ ಬೆಳಕಿಗೆ ಬರಲು, ನವರಸ ನಾಯಕ ಜಗ್ಗೇಶ್ ಅವರಿಗೆ ಟರ್ನ್ ನೀಡಿದ ಚಿತ್ರ. ಹಾಗೆಯೇ ರಾಮ್ ಬಾಬು ಬ್ಯಾನರ್‌ಗೂ ಆರ್ಥಿಕ ಶಕ್ತಿ ತುಂಬಿತ್ತು.
ಈಗ 'ಸಂಜು ವೆಡ್ಸ್ ಗೀತಾ' ಚಿತ್ರದ ಮೂಲಕ ಸಕ್ಸಸ್‌ಫುಲ್ ನಿರ್ದೇಶಕರಾಗಿ ಹೊರಹೊಮ್ಮಿರುವ ನಾಗಶೇಖರ್ ಅಂತಹದ್ದೇ ಶೀರ್ಷಿಕೆಯ ಚಿತ್ರಕ್ಕೆ ಸಹಿಹಾಕಿದ್ದಾರೆ. ಆ ಚಿತ್ರದ ಹೆಸರು 'ತರ್ಲೆ ನನ್ ಮಕ್ಳು'. ಆದರೆ ಈ ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿಲ್ಲ. ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಹರೀಶ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ಗೌಸ್ ಪೀರ್ ಅವರ ಕತೆ, ಸಂಭಾಷಣೆ ಚಿತ್ರಕ್ಕಿದೆ. ಎಂ ಆರ್ ಸೀನು ಅವರ ಛಾಯಾಗ್ರಹಣ, ಎಟಿ ರವೀಶ್ ಅವರ ಸಂಗೀತ ಚಿತ್ರಕ್ಕಿರುತ್ತದೆ. ಚಿತ್ರದಲ್ಲಿ ನಾಗಶೇಖರ್ ಜೊತೆ ಮತ್ತಿಬ್ಬರು ಅಭಿನಯಿಸಲಿದ್ದಾರೆ. ಚಿತ್ರದ ಸಂಪೂರ್ಣ ವಿವರಗಳು ಇನ್ನಷ್ಟೇ ಹೊರಬೀಳಬೇಕು. (ಏಜೆನ್ಸೀಸ್)
More from Filmibeat
English summary
Nagashekar's one more titled as Tharle Nan Maklu. He is not directing this film but only acting in the 'prankster' role. Harish is directing this film and it is debut for Harish. Ghause Peer has penned the story and dialogues.


Click it and Unblock the Notifications











