twitter
    For Quick Alerts
    ALLOW NOTIFICATIONS  
    For Daily Alerts

    ಉಮಾಶ್ರೀಗೆ ರಾಷ್ಟ್ರೀಯ ಪ್ರಶಸ್ತಿಯ 'ಗುಲಾಬಿ'

    By Staff
    |

    2007-08ನೇ ಸಾಲಿನ 55ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಯಿತು. ಈ ಮುಂಚೆ ಊಹಿಸಿದಂತೆಯೇ ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟ ಪ್ರಶಸ್ತಿಗಳು ಕ್ರಮವಾಗಿ ನಟಿ ಉಮಾಶ್ರೀ ಮತ್ತು ನಟ ಪ್ರಕಾಶ್ ರೈ ಅವರ ಪಾಲಾಗಿವೆ.

    'ಗುಲಾಬಿ ಟಾಕೀಸ್' ಅತ್ಯುತ್ತಮ ಅಭಿನಯಕ್ಕಾಗಿ ನಟಿ ಉಮಾಶ್ರೀ ಹಾಗೂ 'ಕಾಂಜಿವರಂ' ತಮಿಳು ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ನಟ ಪ್ರಕಾಶ್ ರೈ(ಪ್ರಕಾಶ್ ರಾಜ್)ಅವರಿಗೆ ಪ್ರಶಸ್ತಿಗಳು ವರಿಸಿವೆ. 'ಗುಲಾಬಿ ಟಾಕೀಸ್" ಚಿತ್ರದ ಅಭಿನಯಕ್ಕೆ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದ ಬಗ್ಗೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ.

    ಈ ಬಾರಿಯ ಅತ್ಯುತ್ತಮ ನಟ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಅವರು ಇದ್ದರು. ಇವರೆಲ್ಲರನ್ನೂ ಹಿಂದಿಕ್ಕಿ ಅತ್ಯುತ್ತಮ ನಟ ಪ್ರಶಸ್ತಿ ಪ್ರಕಾಶ್ ರೈ ಅವರ ಪಾಲಾಗಿರುವುದು ವಿಶೇಷ. ಈ ಹಿಂದೆ ಪ್ರಕಾಶ್ ರೈ ಅವರಿಗೆ 1998ರಲ್ಲಿ 'ಇರುವರ್' ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಬಂದಿತ್ತು. 2003ರಲ್ಲಿ ವಿಶೇಷ ಪ್ರಶಸ್ತಿಯೂ ರೈ ಅವರನ್ನು ವರಿಸಿತ್ತು.

    2007ರಲ್ಲಿ 'ಕಾಂಚಿವರಂ' ಚಿತ್ರ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿತ್ತು. ಈ ಚಿತ್ರವನ್ನು ಪ್ರಿಯದರ್ಶನ್ ನಿರ್ದೇಶಿಸಿದ್ದು ಸ್ವಾತಂತ್ರ್ಯಪೂರ್ವದ ಕಾಂಚಿಪುರಂನ ರೇಷ್ಮೆ ನೇಯ್ಗೆಕಾರರ ಕಥಾ ಹಂದರವನ್ನು ಒಳಗೊಂಡಿದೆ. ಮಾರಾಠಿಯ 'ಟಿಂಗ್ಯಾ' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಶರದ್ ಗೋಯಂಕಾರ್ ಗೆ ಲಭಿಸಿದೆ.

    ಫಿರೋಜ್ ಖಾನ್ ರ 'ಗಾಂಧಿ ಮೈ ಫಾದರ್' ಚಿತ್ರದಲ್ಲಿನ ನಟನೆಗಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ದರ್ಶನ್ ಝರಿವಾಲಾ ಅವರಿಗೆ ಸಂದಿದೆ. ಈ ಚಿತ್ರ ವಿಶೇಷ ಜ್ಯೂರಿ ಪ್ರಶಸ್ತಿಗೂ ಪಾತ್ರವಾಗಿದೆ. ಮಹಾತ್ಮಾಗಾಂಧಿ ಮತ್ತು ಹರಿಲಾಲ್ ಗಾಂಧಿ ಅವರ ನಡುವಿನ ಸಂಬಂಧವನ್ನು ಚಿತ್ರ ಒಳಗೊಂಡಿದೆ.

    'ತಾರೆ ಜಮೀರ್ ಪರ್' ಚಿತ್ರಕ್ಕೆ ಅತ್ಯುತ್ತಮ ಕೌಟುಂಬಿಕ ಚಿತ್ರ ಪ್ರಶಸ್ತಿಯನ್ನು ನೀಡಲಾಗಿದೆ. 'ಚಕ್ ದೇ' ಚಿತ್ರಕ್ಕೆ ಸಂಪೂರ್ಣ ಮನರಂಜನಾತ್ಮಕ ಚಿತ್ರ ಪ್ರಶಸ್ತಿ ನೀಡಲಾಗಿದೆ. ತಾರೆ ಜಮೀರ್ ಪರ್ ಚಿತ್ರದಲ್ಲಿನ 'ಮೇರಿ ಮಾ' ಗಾಯನಕ್ಕಾಗಿ ಶಂಕರ್ ಮಹದೇವನ್ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ ನೀಡಲಾಗಿದೆ. ಇದೇ ಚಿತ್ರ ಗೀತೆಗಾಗಿ ಅತ್ಯುತ್ತಮ ಸಾಹಿತ್ಯ ಪ್ರಶಸ್ತಿಯನ್ನು ಪ್ರಸೂನ್ ಜೋಶಿ ಅವರಿಗೆ ನೀಡಲಾಗಿದೆ.

    ಮಲಯಾಳಿ ಚಿತ್ರ 'ನಾಲು ಪೆನ್ನುಗಳ್' ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಆಡೂರು ಗೋಪಾಲ ಕೃಷ್ಣನ್ ಅವರಿಗೆ ನೀಡಲಾಗಿದೆ. ಪಂಕಜ್ ಕಪೂರ್ ಅಭಿನಯದ 'ಧರಂ' ಚಿತ್ರಕ್ಕಾಗಿ ರಾಷ್ಟ್ರೀಯ ಭಾವೈಕ್ಯ ಪ್ರಶಸ್ತಿ ನೀಡಲಾಗಿದೆ.

    ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿಗಳ ಆಯ್ಕೆ ಪಟ್ಟಿಯಲ್ಲಿ ಸಾಯಿ ಪರಾಂಜಪೆ ಒಳಗೊಂಡಂತೆ ಅಶೋಕ್ ವಿಶ್ವನಾಥ್ ಮತ್ತು ನಮಿತಾ ಗೋಖಲೆ ಸದಸ್ಯರಿದ್ದರು. ಪ್ರಶಸ್ತಿಗಾಗಿ102 ಚಲನಚಿತ್ರಗಳು ಸೇರಿದಂತೆ 106 ಅಸಂಪ್ರದಾಯಿಕ ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಒಟ್ಟಿನಲ್ಲಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗಳು ಕನ್ನಡಿಗರ ಪಾಲಾಗಿರುವುದು ನಿಜಕ್ಕೂ ಕನ್ನಡಿಗರಿಗೆ ಖುಷಿಕೊಟ್ಟಿದೆ.

    ಸ್ಪರ್ಧೆಯಲ್ಲಿ ಕನ್ನಡ ಚಿತ್ರಗಳಾದ ಮೊಗ್ಗಿನ ಮನಸು, ಏಕಲವ್ಯ ಮತ್ತು ಮಾತಾಡ್ ಮಾತಾಡ್ ಚಿತ್ರಗಳು ಇದ್ದವು. ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಅಕಾಲಿಕ ನಿಧನದಿಂದಾಗಿ 2007-08ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪ್ರಕಟಣೆಯನ್ನು ಮುಂದೂಡಲಾಗಿತ್ತು.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Monday, September 7, 2009, 18:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X