ಅಮ್ಮನಾಗಲಿದ್ದಾರೆ ಮಲ್ಲು ಬೆಡಗಿ ನವ್ಯಾ ನಾಯರ್

By Rajendra

ಮಲ್ಲು ಬೆಡಗಿ ನವ್ಯಾ ನಾಯರ್ ಈಗ ತುಂಬು ಗರ್ಭಿಣಿ. ಮುಂಬೈ ಉದ್ಯಮಿ ಸಂತೋಷ್ ಮೆನನ್ ಕೈಹಿಡಿದ ಮೇಲೆ ಆಕೆ ಮುಂಬೈನಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದರು. ನವೆಂಬರ್ ಮಾಸಕ್ಕೆ ನವಮಾಸಗಳು ತುಂಬಿ ಆಕೆ ಅಮ್ಮನಾಗಲಿದ್ದಾರೆ ಎಂದು ವೈದ್ಯರು ಈಗಾಗಲೆ ತಿಳಿಸಿದ್ದಾರೆ ಎಂದು ನವ್ಯಾ ನಾಯರ್ ಕೇರಳ ಮಾಧ್ಯಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ.

ಇಷ್ಟು ದಿನ ಮುಂಬೈನಲ್ಲಿ ವಾಸಿಸುತ್ತಿರುವ ನವ್ಯಾ ನಾಯರ್ ಈಗ ಕೇರಳದ ತವರುಮನೆ ತಲುಪಿದ್ದಾರೆ. ಸದ್ಯಕ್ಕೆ ಆಕೆ 'ಸದ್ಗಮಯ' ಎಂಬ ಮಲಯಾಳಂ ಚಿತ್ರವನ್ನು ಮುಗಿಸಿಕೊಡಬೇಕಾಗಿದೆ. ಚಿತ್ರದಲ್ಲಿ ಆಕೆ ಮಾನಸಿಕ ಅಸ್ವಸ್ಥಳಾಗಿ ಯಮುನಾ ಪಾತ್ರದಲ್ಲಿ ಕಾಣಿಸಲಿದ್ದಾರೆ ಎನ್ನುತ್ತವೆ ಮೂಲಗಳು.

ನವ್ಯಾ ನಾಯರ್ ಕನ್ನಡದಲ್ಲಿ ನಟಿಸಿದ ಕೊನೆಯ ಚಿತ್ರ 'ಬಾಸ್'. ಇದಕ್ಕೂ ಮುನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ 'ಭಾಗ್ಯದ ಬಳೆಗಾರ' ಚಿತ್ರದಲ್ಲಿ ಅಭಿನಯಿಸಿದ್ದರು. ಮದುವೆಯಾದ ಬಳಿಕ ಆಕೆ ಚಿತ್ರರಂಗದಿಂದ ಬಹುತೇಕ ದೂರವಾಗಿದ್ದರು. ಈಗ ಬಾಣಂತನದ ಕನವರಿಕೆಯಲ್ಲಿ ನವ್ಯಾ ನಾಯರ್ ತವರು ಸೇರಿದ್ದಾರೆ.

ನಿಮ್ಮ ಮೊಬೈಲಿನಲ್ಲಿ ದಟ್ಸ್ ಕನ್ನಡ ಪ್ರತ್ಯಕ್ಷ!

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X