ಪ್ರೇಮ್ ಕಹಾನಿಗೆ 'ಯು' ಪ್ರಮಾಣಪತ್ರ
ತಾಜ್ ಮಹಲ್ ಖ್ಯಾತಿಯ ಆರ್ ಚಂದ್ರು ನಿರ್ದೇಶಿಸುತ್ತಿರುವ ಪ್ರೇಮ್ ಕಹಾನಿ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಮೆಚ್ಚಿ 'ಯು' ಪ್ರಮಾಣಪತ್ರ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಅಜಯ್ ರಾವ್ ಮತ್ತು ಶೀಲಾ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಶ್ರೀ ಲಕ್ಷ್ಮಿ ಬಾಲಾಜಿ ಪ್ರೊಡಕ್ಷನ್ ಲಾಂಛನದಲ್ಲಿ ಕೆ ಎಂ ವಿಶ್ವನಾಥ್ ಮತ್ತು ಜಿ ರವಿಕುಮಾರ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣ, ಇಳಯರಾಜ ಅವರ ಸಂಗೀತ, ಕೆ ಎಂ ಪ್ರಕಾಶ್ ಅವರ ಸಂಕಲನವಿದೆ. ಕಲ್ಯಾಣ್, ನಾಗೇಂದ್ರಪ್ರಸಾದ್ ಮತ್ತು ಕವಿರಾಜ್ ಅವರು ಚಿತ್ರದ ಹಾಡುಗಳಿಗೆ ಸಾಹಿತ್ಯ ನೀಡಿದ್ದಾರೆ. ರಂಗಾಯಣರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೋ ನಾಗರಾಜ್ ಮತ್ತು ಟೆನ್ನಿಸ್ ಕೃಷ್ಣ ಅಭಿನಯಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
More from Filmibeat
kannada movies ಸೆನ್ಸಾರ್ ajay ಅಜಯ್ ಪ್ರೇಮ್ ಕಹಾನಿ ಶೀಲಾ prem kahani sheela censorship r chandru ಆರ್ ಚಂದ್ರು ತಾಜ್ ಮಹಲ್


Click it and Unblock the Notifications











