ಬ್ಯಾಂಕಾಕ್‌ನಲ್ಲಿ ಜಿಂಕೆಮರಿ ರೇಖಾ ಪ್ರೇಮ ಚಂದ್ರಮ
ಜೇನುಕಲ್ಲು ಚಿತ್ರಾಲಯ ಲಾಂಛನದಲ್ಲಿ ಯು.ಇ.ಗಣೇಶ್, ಜಿ.ಕುಮಾರ್, ಜಿ.ಎಸ್.ಜಗದೀಶ್ ಹಾಗೂ ಸುನೀಲ್‌ಕುಮಾರ್‌ಶಿಂಧೆ ನಿರ್ಮಿಸುತ್ತಿರುವ 'ಪ್ರೇಮ ಚಂದ್ರಮ' ಚಿತ್ರದ ನಾಲ್ಕು ಹಾಡುಗಳ ಚಿತ್ರೀಕರಣ ಬ್ಯಾಂಕಾಕ್‌ನಲ್ಲಿ ಸೆಪ್ಟೆಂಬರ್ ತಿಂಗಳ 18ರಿಂದ ಆರಂಭವಾಗಲಿದೆ.
ಕಿರಣ್, ರಘುಮುಖರ್ಜಿ, ರೇಖಾ ಹಾಗೂ ವಿದೇಶಿ ನರ್ತಕರ ಅಭಿನಯದಲ್ಲಿ ಒಟ್ಟು ಹನ್ನೆರಡು ದಿನಗಳ ಕಾಲ ಹಾಡುಗಳ ಚಿತ್ರೀಕರಣ ನಡೆಯಲಿದೆ ಎಂದು ನಿರ್ದೆಶಕ ಶಾಹುರಾಜ್ ಶಿಂಧೆ ತಿಳಿಸಿದ್ದಾರೆ. ಸಕಲೇಶಪುರ, ಕಾಗಿನೆಲೆ, ಮೈಸೂರು, ಬೆಂಗಳೂರು ಮುಂತಾದೆಡೆ ಮಾತಿನ ಭಾಗದ ಚಿತ್ರೀಕರಣ ನಡೆದಿದೆ.
ವಿ.ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಎಚ್.ಸಿ.ವೇಣು ರವರ ಛಾಯಾಗ್ರಹಣವಿದೆ. ಶಶಿಧರ್‌ಭಟ್(ಶಿರಸಿ) ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮರ ಸಾಹಸವಿರುವ ಪ್ರೇಮ ಚಂದ್ರಮ ಚಿತ್ರದ ತಾರಾಬಳಗದಲ್ಲಿ ರಘುಮುಖರ್ಜಿ, ಕಿರಣ್(ಹಾಗೆ ಸುಮ್ಮನೆ), ರೇಖಾ, ಶ್ರೀನಾಥ್, ಉಮಾಶ್ರೀ, ಸುಮಿತ್ರ, ಯು.ಇ.ಗಣೇಶ್ ಮುಂತಾದವರಿದ್ದಾರೆ.
More from Filmibeat
ಪ್ರೇಮ ಚಂದ್ರಮ ರಘು ಮುಖರ್ಜಿ ರೇಖಾ ಶ್ರೀನಾಥ್ ಉಮಾಶ್ರೀ ಬ್ಯಾಂಕಾಕ್ prema chandrama raghu mukherjee rekha umashree bangkok


Click it and Unblock the Notifications











