'ಉಪೇಂದ್ರ ಹೆಂಡತಿ'ಗಿಂತ ಕಲಾವಿದೆ ಪಟ್ಟ ನನಗಿಷ್ಟ: ಪ್ರಿಯಾಂಕ

<ul id="pagination-digg"><li class="previous"><a href="/news/07-actress-priyanka-upendra-acts-ravichandran-movie-aid0172.html">« Previous</a>

"ಉಪೇಂದ್ರ ಮಡದಿ ಎಂಬ ಹಣೆಪಟ್ಟಿ ಕಿತ್ತೊಗೆಯಲು ನಾನು ನಿರ್ಧರಿಸಿದ್ದೇನೆ. ಜನರು ನನ್ನನ್ನು 'ಉಪೇಂದ್ರ ಪತ್ನಿ' ಎಂದು ಗುರುತಿಸುವುದಕ್ಕಿಂತ ನಾನೊಬ್ಬಳು 'ಕಲಾವಿದೆ' ಎಂದು ಗುರುತಿಸಬೇಕು. ಮಡದಿ ಪಟ್ಟಕ್ಕಿಂತ ಕಲಾವಿದೆಯ ಪಟ್ಟವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಮದುವೆಯಾಗಿ ಮಕ್ಕಳಾದ ಮೇಲೆ ನಟಿಸಿದ ಕನ್ನಡ ನಟಿಯರ ಅಪರೂಪದ ಸಾಧನೆಯ ಪಟ್ಟಿಗೆ ನಾನು ಸೇರಲು ಇಷ್ಟಪಡುತ್ತೇನೆ" ಎಂದಿದ್ದಾರೆ ಉಪೇಂದ್ರ ಮಡದಿ ಪ್ರಿಯಾಂಕ.

ಮಲ್ಲ ಚಿತ್ರದಲ್ಲಿ ರವಿಚಂದ್ರನ್ ಜೊತೆ ಹಾಡಿನಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದರು ಪ್ರಿಯಾಂಕ. ಅದರ ಬಗ್ಗೆ ಪ್ರೇಕ್ಷಕರು 'ಅತಿಯಾಯ್ತು, ರವಿಚಂದ್ರನ್ ಜೊತೆ ಪ್ರಿಯಾಂಕ ಇಷ್ಟೊಂದು ಹಾಟ್ ಆಗಿ ಕಾಣಿಸಿಕೊಳ್ಳಬಾರದಿತ್ತು' ಎಂದು ಅಭಿಪ್ರಾಯಪಟ್ಟಿದ್ದರು. ರವಿಚಂದ್ರನ್ ಹಾಗೂ ಪ್ರಿಯಾಂಕ ಮಧ್ಯೆ 'ತೆರೆಯ ಮೇಲೆ ಹೊರತಾಗಿ ತೆರೆಮರೆಯಲ್ಲೂ ಏನೋ ಇದೆ' ಎಂಬಂತೆ ಮಾತನಾಡುತ್ತಿದ್ದರು. ಆದರೆ ಉಪೇಂದ್ರರನ್ನು ಮದುವೆಯಾಗುವ ಮೂಲಕ ಪ್ರಿಯಾಂಕ ಅವೆಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು.

ಆ ಕುರಿತು "ಮಲ್ಲ ಚಿತ್ರದಲ್ಲಿ ನನಗೆ ದ್ವಿಪಾತ್ರವಿತ್ತು. ಒಂದರಲ್ಲಿ ನಾನು ರವಿಚಂದ್ರನ್ ತಾಯಿ ಹಾಗೂ ಇನ್ನೊಂದರಲ್ಲಿ ಅವರಿಗೆ ಪ್ರೇಯಸಿ. ಅದರಲ್ಲಿ ನೆಗೆಟಿವ್ ಶೇಡ್ ಕೂಡ ಇತ್ತು. ಅದರಲ್ಲಿ ಒಂದು ಪಾತ್ರಕ್ಕೆ ಅಗತ್ಯವಿದ್ದುದರಿಂದ ಹಾಡುಗಳಲ್ಲಿ ಗ್ಲಾಮರಸ್ ಹಾಗೂ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದೆ. ಆದರೆ ಬೇರೆ ಎಲ್ಲಾ ಬಿಟ್ಟು ಜನ ಕೇವಲ ಹಾಡುಗಳ ಬಗ್ಗೆ ಮಾತ್ರ ಮಾತನಾಡಿದ್ದರು. ಒಬ್ಬ ಕಲಾವಿದೆಯಾಗಿ ನಾನು ಪಾತ್ರಕ್ಕೆ ನ್ಯಾಯ ಒದಗಿಸಿದ್ದೆ ಅಷ್ಟೆ" ಎಂದಿದ್ದಾರೆ.

ಇದೀಗ ಬಹಳಷ್ಟು ವರ್ಷಗಳ ನಂತರ ಮತ್ತೆ ಅದೇ ರವಿಚಂದ್ರನ್ ಜೊತೆ ನಟಿಸಲಿದ್ದಾರೆ ಪ್ರಿಯಾಂಕ. ಅವರಿಬ್ಬರ ಯಶಸ್ವೀ ಜೋಡಿ ಮತ್ತೆ ತೆರೆಯ ಮೇಲೆ ಪ್ರೇಕ್ಷಕರಿಗೆ ಮೋಡಿ ಮಾಡಲಿದೆ. ಇದಕ್ಕೆ ಪ್ರಿಯಾಂಕ ಪತಿ ಉಪೇಂದ್ರರ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿರುವದರಿಂದ ಪ್ರಿಯಾಂಕ ಖುಷಿಯಾಗಿದ್ದಾರೆ. ಅವರೊಳಗಿದ್ದ ಕಲಾವಿದೆ ಮತ್ತೆ ಜಾಗೃತರಾಗಿದ್ದಾಳೆ. ಹೀಗೆ ಸದ್ಯದಲ್ಲೇ ಮತ್ತೆ ಪ್ರಿಯಾಂಕರನ್ನು ತೆರೆಯ ಮೇಲೆ ನೋಡಯವ ಭಾಗ್ಯ ಪ್ರೇಕ್ಷಕರಿಗೆ ಲಭಿಸಲಿದೆ. (ಒನ್ ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/07-actress-priyanka-upendra-acts-ravichandran-movie-aid0172.html">« Previous</a>

More from Filmibeat

English summary
Actress Priyanka Upendra is to act Crazy Star Ravichandran Remake movie Malayalam Traffic. She told that she acted many Bengali and Bollywood movies and now, this is the first Kannada movie after her marriage with Upendra. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X