ರಷ್ಯನ್ ನರ್ತಕಿಯರ ಜೊತೆ 'ಪರಮಾತ್ಮ' ಡಾನ್ಸ್

By Rajendra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಪರಮಾತ್ಮ ಚಿತ್ರೀಕರಣ ಭರದಿಂದ ಸಾಗಿದೆ. ಯೋಗರಾಜ್ ಭಟ್ ಆಕ್ಷನ್, ಕಟ್‌ನಲ್ಲಿ ಪುನೀತ್, ಐಂದ್ರಿತಾ ರೇ, ದೀಪಾ ಸನ್ನಿಧಿ ಹಾಗೂ ರಮ್ಯಾ ಬಾರ್ನಾ ಅಭಿನಯಿಸುತ್ತಿರುವ ಚಿತ್ರ ಇದಾಗಿದೆ.

ಗ್ರಾಮೀಣ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಹಾಗೂ ಜಾನಪದ ಶೈಲಿಯ ಹಾಡೊಂದನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು. ಮಾಡ್ರನ್ ಹುಡುಗಿಯಾಗಿ ಐಂದ್ರಿತಾ ರೇ ಹಾಗೂ ಸಾಂಪ್ರದಾಯಿಕ ಗೆಟಪ್‌ನಲ್ಲಿ ದೀಪಾ ಈ ಹಾಡಿಗೆ ನೃತ್ಯ ಮಾಡಿದರು. ಪುನೀತ್ ಜೊತೆ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿರುವ ಐಂದ್ರಿತಾ ಈ ಹಾಡಿನ ಚಿತ್ರೀಕರಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಶಿವರಾಜ್ ಕುಮಾರ್ ಅವರ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಕುಣಿದಿದ್ದೆ. ಹಾಗಾಗಿ ಈಗ ಅಂತಹ ನರ್ವಸ್ ಏನೂ ಆಗಲಿಲ್ಲ. ಈ ಹಾಡು ಅಚ್ಚುಕಟ್ಟಾಗಿ ಮೂಡಿಬರಲು ಪುನೀತ್ ಕೂಡ ತುಂಬಾನೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ ಚಿಗರೆ ಕಂಗಳ ಬೆಡಗಿ ಐಂದ್ರಿತಾ.

ಈ ಹಾಡಿಗಾಗಿ ರಷ್ಯನ್ ನರ್ತಕಿಯರನ್ನು ಬಳಸಿಕೊಂಡಿರುವುದು ವಿಶೇಷ. ಉದ್ದ ಕೂದಲು ಬಿಟ್ಟುಕೊಂಡು ರಂಗಾಯಣ ರಘು ಕೂಡ ಹಾಡಿನಲ್ಲಿ ಕಾಣಿಸಲಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆ ರಚಿಸುವಲ್ಲಿ ನಿರ್ದೇಶಕರಿಗೆ ಸೂರಿ ಸಾಥ್ ನೀಡಿದ್ದಾರೆ. ಹರಿಕೃಷ್ಣರ ಸಂಗೀತವಿರುವ ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಯಾಗ್ರಾಹಕರಾಗಿದ್ದಾರೆ.

ಸುಬ್ರಹ್ಮಣ್ಯ.ಎಂ.ಕೆ ಕಾರ್ಯಕಾರಿ ನಿರ್ಮಾಪಕರಾಗಿರುವ 'ಪರಮಾತ್ಮ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ದೀಪ ಸನ್ನಿಧಿ, ಐಂದ್ರಿತಾ ರೇ, ರಮ್ಯಾ ಬಾರ್ನಾ, ಅವಿನಾಶ್, ರಂಗಾಯಣ ರಘು, ದತ್ತಣ್ಣ ಮುಂತಾದವರಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Power Star Puneeth Rajkumar lead film Paramathma directed by Yogaraj Bhat has busy in songs shooting. It was a diffrent kind of song says Aindrita Ray, she plays lead rolen in the film. At this song sequence of ‘Paramathma’ a Russian dancer was used.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X