ಸಿನಿಮಾ ಶೀರ್ಷಿಕೆಯಾದ ಪುನೀತ್ ಹೆಸರು!

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಕ್ರೇಜನ್ನು ಬೆಳೆಸಿಕೊಂಡ ನಟ ಪುನೀತ್ ರಾಜ್ ಕುಮಾರ್. ಈ ಬಗ್ಗೆ ವಿಶೇಷವಾಗಿ ಹೇಳುವುದೇನು ಇಲ್ಲ. ಆ ಹೆಸರಿನ ಜನಪ್ರಿಯತೆಯನ್ನೇ ಬಂಡವಾಳ ಮಾಡಿಕೊಳ್ಳುವುದು ಎಂದರೆ ಇದೇ ಏನೋ! ಮತ್ತೊಂದು ಮುಖ್ಯ ವಿಚಾರವೆಂದರೆ, ಈ ಚಿತ್ರದ ನಾಯಕ ಪುನೀತ್ ರಾಜ್ ಕುಮಾರ್ ಅಲ್ಲ, ದೀಲೀಪ್ ಪೈ ಎಂಬುವವರು.
ಹೌದು ಈ ದೀಲೀಪ್ ಪೈ ಯಾರು? ವರ್ಷದ ಹಿಂದೆ ಸಾಯಿ ಪ್ರಕಾಶ್ ನಿರ್ದೇಶನದ ರೋಡ್ ರೋಮಿಯೋ ಚಿತ್ರದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಈಗ ಪುನೀತ್ ಚಿತ್ರದ ಮೂಲಕ ತಮ್ಮ ಅದೃಷ್ಟವನ್ನು ಮತ್ತೊಮ್ಮೆ ಪರೀಕ್ಷಿಸಲು ಆಗಮಿಸಿದ್ದಾರೆ. ನೀಲ್ ಕಮಲ್ ಎಂಬುವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಪರಭಾಷಾ ಶೀರ್ಷಿಕೆಗಳಿಗೆ ಕೆ ಎಫ್ ಸಿಸಿ ಕಡಿವಾಣ
ಕನ್ನಡ ಸಿನಿಮಾ kannada movies ಪುನೀತ್ ರಾಜ್ ಕುಮಾರ್ puneeth rajkumar ಪುನೀತ್ ಚಿತ್ರ ದೀಲೀಪ್ ಪೈ ನೀಲ್ ಕಮಲ್ actor dilip pai neel kamal


Click it and Unblock the Notifications