ದಟ್ಸ್‌ಕನ್ನಡಕ್ಕೆ ಲಭಿಸಿದ ಎಕ್ಸ್‌ಕ್ಲೂಸಿವ್ ರಜನಿಕಾಂತ್ ಚಿತ್ರ
ಸ್ಟೈಲ್ ಕಿಂಗ್ ರಜನಿಕಾಂತ್ ಅವರು ಸಿಂಗಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅವರು ಹೇಗಿದ್ದಾರೋ ಏನು ಎಂಬ ಆತಂಕ ಮಾತ್ರ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಎಕ್ಸ್‌ಕ್ಲೂಸಿವ್ ಚಿತ್ರವನ್ನು ನಮ್ಮ ಚೆನ್ನೈ ಪ್ರತಿನಿಧಿ ಕಳುಹಿಸಿಕೊಟ್ಟಿದ್ದಾರೆ.
ಚಿತ್ರದಲ್ಲಿ ರಜನಿ ಸ್ವಲ್ಪ ಸುಸ್ತಾದಂತೆ ಕಾಣುತ್ತಿದ್ದು, ಹಾಸಿಗೆ ಒರಗಿ ಸುಧಾರಿಸಿಕೊಳ್ಳುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಅಂಶ ಈ ತಾಜಾ ಚಿತ್ರದಲ್ಲಿ ಕಾಣಬಹುದು. ಚೆನ್ನೈನಲ್ಲಿ ಚಿಕಿತ್ಸೆ ಪಡೆದ ಬಳಿಕ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹಾರಿದ್ದರು.
ಇದೇ ಆಗಸ್ಟ್ ತಿಂಗಳಿಂದ ಅವರ ಪ್ರತಿಷ್ಠಿತ ರಾಣಾ ಚಿತ್ರೀಕರಣ ಭರದಿಂದ ಸಾಗಲಿದೆ ಎನ್ನುತ್ತದೆ ರಜನಿ ಆಪ್ತವಲಯ. ನ್ಯುಮೋನಿಯಾ, ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ರಜನಿಕಾಂತ್ ಬಳಲುತ್ತಿದ್ದರು. ರಜನಿ ಆಸ್ಪತ್ರೆ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿನ ಆತಂಕವನ್ನು ಕೊಂಚ ದೂರ ಮಾಡುವ ಪ್ರಯತ್ನ ಮಾಡಿದ್ದಾರೆ ಅವರ ಕುಟುಂಬಿಕರು. (ಏಜೆನ್ಸೀಸ್)


Click it and Unblock the Notifications











