ರೀರೆಕಾರ್ಡಿಂಗ್‌ನಲ್ಲಿ ರಂಗಪ್ಪ ಹೋಗ್ಬಿಟ್ನಾ
ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಮಹೇಶ್ ಕೊಠಾರಿ ಹಾಗೂ ಬಿ.ಎಚ್.ಬಾಷಾ ರವರ ಆಶೀರ್ವಾದದೊಂದಿಗೆ ಶಾಂತಾ ಎಂಟರ್ ಪ್ರೈಸಸ್ ಮೂಲಕ ಎನ್.ರವಿಕುಮಾರ್ ನಿರ್ಮಿಸುತ್ತಿರುವ 'ರಂಗಪ್ಪ ಹೋಗ್ಬಿಟ್ನಾ ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಿನ್ನಲೆ ಸಂಗೀತ ಅಳವಡಿಸಲಾಗುತ್ತಿದೆ.
ಸದ್ಯದಲ್ಲೇ ಚಿತ್ರ ಡಿಟಿಎಸ್ ತಂತ್ರಜ್ಞಾನದಿಂದ ಶೃಂಗಾರಗೊಳ್ಳಲಿದ್ದು, ಮಾಸಾಂತ್ಯಕ್ಕೆ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ ಎಂದು ನಿರ್ದೇಶಕ ಎಂ.ಎಲ್.ಪ್ರಸನ್ನ ತಿಳಿಸಿದ್ದಾರೆ. ಹಾಸ್ಯಪ್ರಧಾನ ಈ ಚಿತ್ರದ ನಾಯಕನಾಗಿ ರಮೇಶ್ ಅಭಿನಯಿಸಿದ್ದಾರೆ. ಸಂಜನಾ ಚಿತ್ರದ ನಾಯಕಿ.
ಈ ಚಿತ್ರದ ತಾರಾಬಳಗದಲ್ಲಿ ಸಿಹಿಕಹಿಚಂದ್ರು, ರವಿಕಿರಣ್, ಮನದೀಪ್‌ರಾಯ್, ಸಾಧುಲಯೇಂದ್ರ ಮುಂತಾದವರಿದ್ದಾರೆ. ನಿರ್ದೇಶಕರೇ ಚಿತ್ರಕಥೆ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎ.ಸಿ.ಮಹೇಂದರ್ ಛಾಯಾಗ್ರಹಣ ಹಾಗೂ ಹರ್ಷ ರವರ ಸಂಕಲನವಿದೆ.
ರಮೇಶ್ ಅರವಿಂದ್ ಸಂಜನಾ ಪ್ರೀತಿಯಿಂದ ರಮೇಶ್ ರಂಗಪ್ಪ ಹೋಗ್ಬಿಟ್ನಾ ಸಿಹಿಕಹಿ ಚಂದ್ರು ಕರಿಬಸವಯ್ಯ rangappa hogbitna ramesh aravind sanjana prasanna sihikahi chandru


Click it and Unblock the Notifications