»   »  ಚಲನಚಿತ್ರ ವಾಣಿಜ್ಯ ಮಂಡಳಿಗೆ ರುಚಿಸದ ರಸಗುಲ್ಲ!

ಚಲನಚಿತ್ರ ವಾಣಿಜ್ಯ ಮಂಡಳಿಗೆ ರುಚಿಸದ ರಸಗುಲ್ಲ!

Subscribe to Filmibeat Kannada
ಮುಹೂರ್ತದ ದಿನ ಚಿತ್ರಕ್ಕೆ ಇಟ್ಟ ಹೆಸರು ಬಿಡುಗಡೆಯ ವೇಳೆಗೆ ಬದಲಾಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಈಗ ಸಾಮಾನ್ಯವಾಗಿದೆ. ಇದಕ್ಕೆ ಕೆಲವು ನಿರ್ಮಾಪಕರು ಜೋತಿಷ್ಯದ ಕಾರಣ ನೀಡಿದರೆ ಮತ್ತೆ ಕೆಲವರದು ಬೇರೆಯದೇ ಸಮಸ್ಯೆ. ಒಟ್ಟಿನಲ್ಲಿ ಮರುನಾಮಕರಣ ಮಾಡಿಕೊಳ್ಳುತ್ತಿರುವ ಚಿತ್ರಗಳ ಸಾಲಿಗೆ 'ರಸಗುಲ್ಲ' ಕೂಡ ಸೇರಿದೆ.

ರಸಗುಲ್ಲ ಎಂದು ಆರಂಭವಾದ ಚಿತ್ರ ಈಗ ನಿರ್ದೋಷಿಯಾಗಿದೆ. ವಾಣಿಜ್ಯ ಮಂಡಲಿಯಿಂದ 'ರಸಗುಲ್ಲ ಹೆಸರಿಗೆ ಅಪ್ಪಣೆ ದೊರಕದ ಕಾರಣ ಶೀರ್ಷಿಕೆ ಬದಲಿಸಲಾಯಿತು ಎಂದು ನಿರ್ಮಾಪಕಿ ಕುಮಾರಿ ಸಂಜನಾ ತಿಳಿಸಿದ್ದಾರೆ. ಕನ್ನಡದಲ್ಲಿ ನಿರ್ಮಾಣವಾಗಿ ತೆಲಗು ಹಾಗೂ ಹಿಂದೆ ಭಾಷೆಗೆ ಡಬ್ಬ್ ಆಗುತ್ತಿರುವ ನಿರ್ದೋಷಿ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ.

ಖ್ಯಾತನಟ ಕುಲಭೂಷಣ್ ಖರ್‌ಬಂದಾ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರಕ್ಕೆ ಗೋವರ್ಧನ್ ಅವರು ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿರುವುದ್ದಲ್ಲದೆ ಸಂಗೀತವನ್ನೂ ಸಂಯೋಜಿಸಿದ್ದಾರೆ. ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆ, ದಿವಾಕರ್ ರಾವ್ ಛಾಯಾಗ್ರಹಣ, ಪಿ.ಆರ್.ಸೌಂದರರಾಜ್ ಸಂಕಲನ, ಲೀಲಾಮನೋಹರ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪಿಯೂಷ್, ಆನಂದ್, ಕಶೀಷ್‌ರೀಚಾ, ಆರ್ಯ, ಮನೋಜ್, ಕುಲಭೂಷಣ್ ಖರ್‌ಬಂದಾ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)
ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ರಸಗುಲ್ಲ!
ತೆಲುಗು, ಹಿಂದಿ ಭಾಷೆಗೆ ಕನ್ನಡದ ರಸಗುಲ್ಲ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada