ದರ್ಶನ್ ಬಿಡುಗಡೆ ಸಂತಸ ಹಂಚಿಕೊಂಡ ಅಣ್ಣಾಬಾಂಡ್

ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ "ಎಲ್ಲಾ ಸಂಸಾರಗಳಲ್ಲೂ ಇದು ಸಹಜ. ಯಾರೂ ಬೇಕಂತಲೇ ತಪ್ಪು ಮಾಡುವುದಿಲ್ಲ. ಏನೋ ತಿಳಿಯದೇ ನಡೆದುಹೋಗುತ್ತೆ. ಎಲ್ಲವರ ಲೈಫು ಇಷ್ಟೇನೇ...! ದೇವರು ಇದ್ದಾನೆ, ಒಳ್ಳೇದು ಮಾಡ್ತಾನೆ. ಅಷ್ಟೇ ಅಲ್ಲ, ಅವರ ತಂದೆ-ತಾಯಿ, ಹಿರಿಯರು ಹಾಗೂ ಅಭಿಮಾನಿಗಳ ಆಶೀರ್ವಾದ ಅವರ ಮೇಲಿದೆ. ಎಲ್ಲಾ ಒಳ್ಳೆಯದಾಗುತ್ತೆ" ಎಂದಿದ್ದಾರೆ.
ಪವರ್ ಸ್ಟಾರ್ ಪುನೀತ್ ಮಾತನಾಡಿ "ದರ್ಶನ್ ಬಿಡುಗಡೆ ತುಂಬಾ ಸಂತೋಷ ತಂದಿದೆ. ಆದಷ್ಟು ಬೇಗ ಕೋರ್ಟ್ ನಿಯಮ, ಔಪಚಾರಿಕತೆಯನ್ನು ಪೂರೈಸಿ ದರ್ಶನ್ ಬಿಡುಗಡೆ ಆಗಲಿ" ಎಂದಿದ್ದಾರೆ.
ನಿರ್ದೇಶಕ ಸೂರಿ " ದರ್ಶನ್ ಬಿಡುಗಡೆ ಅವರ ಅಭಿಮಾನಿಗಳ ಜೊತೆ ನನಗೂ ಖುಷಿ ತಂದಿದೆ. ನಾನೂ ಕೂಡ ಅವರ ಹಾಗೂ ಅವರ ಸಿನಿಮಾದ ಅಭಿಮಾನಿ. ಬೇಗ ಬಿಡುಗಡೆ ಆಗಲಿ" ಎಂದು ಹಾರೈಸಿದ್ದಾರೆ.
ಜೊತೆಗೆ ಖ್ಯಾತ ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಅವರು "ದರ್ಶನ್ ಬಿಡುಗಡೆ ನನಗೆ ತಂದಿರುವ ಸಂತಸ ವರ್ಣಿಸಲಕ್ಕೇ ಅಸಾಧ್ಯ. ನಾನು ಅವರನ್ನು ನೋಡಲಿಕ್ಕೆ ಈಗಲೇ ಹೋಗುತ್ತಿದ್ದೇನೆ. ಅದಕ್ಕಿಂತ ಸಂತೋಷದ ವಿಷಯ ನನಗೆ ಬೇರೇನೂ ಇಲ್ಲ" ಎಂದು ಸಖತ್ ಖುಷಿಖುಷಿಯಿಂದ ಹೇಳಿದ್ದಾರೆ.
ಹೀಗೆ 'ಅಣ್ಣಾಬಾಂಡ್ ಸೆಟ್' ನಿಂದ ಸಂತೋಷದ ಸುರಿಮಳೆ ಸುರಿದಿದೆ. ದರ್ಶನ್ ಬಿಡುಗಡೆಗೆ ಸಂತೋಷ ಸಾಗರವೇ ಹರಿದಿದೆ. ಚಿತ್ರರಂಗದ ಗಣ್ಯರೆಲ್ಲ ಸಂತೋಷದೊಂದಿಗೆ ಮುಂದೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.


Click it and Unblock the Notifications











