For Quick Alerts
  ALLOW NOTIFICATIONS  
  For Daily Alerts

  ಜೋಶ್‌ನಲ್ಲಿ ಲಂಡನ್ ಬೆಡಗಿ ನವನಟರ ನರ್ತನ

  By Staff
  |

  ಕಳೆದ ವಾರ ಆರಂಭವಾದ ಜೋಶ್ಗೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಅಬ್ಬಾಯಿನಾಯ್ಡು ಸ್ಟೂಡಿಯೋದಲ್ಲಿ ಕಲಾ ನಿರ್ದೇಶಕ ಮೋಹನ್ ಅವರಿಂದ ನಿರ್ಮಿತವಾಗಿರುವ ನಾಲ್ಕು ವಿಶೇಷ ಸೆಟ್‌ಗಳಲ್ಲಿ ನವಯುವ ನಟರಾದ ರಾಕೇಶ್, ವಿಷ್ಣುಪ್ರಸನ್ನ, ಅಲೋಕ್, ಆಕ್ಷಯ್, ಅಮಿತ್, ಜಗನ್ ಹಾಗೂ ಸಹ ನೃತ್ಯಗಾರರು ದೂರದ ಲಂಡನ್‌ನಿಂದ ಬಂದ ಕಾರಾ ಹಡ್ಸನ್ ಅವರೊಂದಿಗೆ

  'ಶಕಲಕ ರಾಕ್ ಅಂಡ್ ರೋಲ್ ಕಂ ಆನ್ ಲೆsಸ್ಟ್ ಬರ್ನ್..ಇನ್ ದಿ ಡ್ಯಾನ್ಸಿಂಗ್ ಫ್ಲೋರ್ ಹೊಡಿ ಬಾ ಜೋಲಿ ಜೋಲಿ ಆಹಾ ಜಾಲಿ ಜಾಲಿ' ಎಂದು ಕುಣಿದಿದ್ದಾರೆ. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಲು ಐಶ್ವರ್ಯ ರೈ ಮೊದಲಾದ ಖ್ಯಾತ ನಟಿಯರ ಆಲ್ಬಂಗಳಿಗೆ ಕೆಲಸ ಮಾಡಿದ ಸ್ಟಾನ್ಲಿ ಡಿ ಕೋಸ್ಟಾ ಮುಂಬೈನಿಂದ ಆಗಮಿಸಿದ್ದು ಚಿತ್ರದ ವಿಶೇಷಗಳಲ್ಲೊಂದು.

  ಶಿವಮಣಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಜೋಶ್ ಚಿತ್ರಕ್ಕೆ ಸಂತೋಷ ರೈ ಪಾತಾಜೆ ಛಾಯಾಗ್ರಾಹಕರಾಗಿದ್ದಾರೆ. ವರ್ಧನ್ ಸಂಗೀತ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲಾ ನಿರ್ದೇಶನ, ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯಶಿವ ಹಾಗೂ ಆನಂದ್ ಗೀತರಚನೆ, ರವಿವರ್ಮ, ಜಾಲಿ ಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ ನಿರ್ದೇಶನ, ಮೈಸೂರು ಕೃಷ್ಣ ಅವರ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣುಪ್ರಸನ್ನ, ಅಕ್ಷಯ್, ಅಲೋಕ್, ಜಗನ್ನಾಥ್, ಅಮಿತ್, ರೋಬೊ ಗಣೇಶ್, ಮಂಡ್ಯ ರಮೇಶ್, ಕರಿಬಸವಯ್ಯ, ಮನದೀಪ್ ರಾಯ್, ತುಳಸಿ ಶಿವಮಣಿ, ಸುಧಾಬೆಳವಾಡಿ ಇದ್ದಾರೆ.

  ಹಲವು ನೂತನಗಳ ಹರಿಕಾರರೆಂದೇ ಕನ್ನಡ ಚಿತ್ರರಂಗದಲ್ಲಿ ಹೆಸರಾಗಿರುವ ಎಸ್.ವಿ.ಬಾಬು ಅವರ ನಿರ್ಮಾಣದ ನೂತನ ಚಿತ್ರ ಜೋಷ್. ಈ ಚಿತ್ರದ ಮೂಲಕ ಬಾಬು ತಮ್ಮ ಮಗ ಸಂಜಯ್ ಬಾಬು ಅವರನ್ನು ನಿರ್ಮಾಪಕರಾಗಿಸಿದ್ದಾರೆ. ಶಿವಮಣಿ ಅವರು ನಿರ್ದೇಶಿಸುತ್ತಿರುವ ಜೋಶ್ ಆರಂಭದಿಂದಲೂ ವಿಶೇಷಗಳ ಸಾಗರವಾಗಿದೆ. ನಿರ್ದೇಶಕರು ನಿರ್ಮಾಪಕರೊಡಗೂಡಿ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ಕರುನಾಡ ಕಲಾವಿದರನ್ನು ಆರಿಸಿ ಅವರನ್ನು ಚಿತ್ರದ ವಿವಿಧ ಭಾಗಗಳಲ್ಲಿ ಬಳಸಿಕೊಂಡು ನುಡಿದಂತೆ ನಡೆದರಲ್ಲದೇ ಚಿಗರು ಪ್ರತಿಭೆಗಳಿಗೆ ಪ್ರೋತ್ಸಾಹಕರಾಗಿದ್ದಾರೆ.

  (ದಟ್ಸ್ ಸಿನಿವಾರ್ತೆ)
  ಜೋಶ್'ನೊಂದಿಗೆ ಹೊಸ ಸಾಹಸಕ್ಕಿಳಿದ ಎಸ್.ವಿ.ಬಾಬು

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X