ಕಲ್ಯಾಣ್ ಜ್ಯೂವೆಲರ್ಸ್ ರಾಯಭಾರಿ ಹ್ಯಾಟ್ರಿಕ್ ಹೀರೋ
ಪ್ರಸಿದ್ಧ ಚಿನ್ನಾಭರಣ ಮಾರಾಟ ಮಳಿಗೆ ಕಲ್ಯಾಣ್ ಜ್ಯೂವೆಲರ್ಸ್ ಕರ್ನಾಟಕದಲ್ಲಿ ತನ್ನ ಶಾಖೆಗಳನ್ನು ತೆರೆಯಲು ಮುಂದಾಗಿದೆ. ತಮ್ಮ ಸಂಸ್ಥೆಗೆ ಕರ್ನಾಟಕದ ರಾಯಭಾರಿಯನ್ನಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೇಮಿಸಿಕೊಂಡಿದೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಕಲ್ಯಾಣ್ ಜ್ಯೂವೆಲರ್ಸ್ 19 ಶಾಖೆಗಳನ್ನು ಹೊಂದಿದೆ. ಈಗ ಕರ್ನಾಟಕದಲ್ಲಿ 20 ಶಾಖೆಗಳನ್ನು ಆರಂಭಿಸುತ್ತಿರುವುದಾಗಿ ಸಂಸ್ಥೆಯ ಅಧ್ಯಕ್ಷ ಕಲ್ಯಾಣ್ ರಮಣ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 11 ಶಾಖೆಗಳನ್ನು ಆರಂಭಿಸುವುದಾಗಿ ಅವರು ಹೇಳಿದರು.
ಶಿವರಾಜ್ ಕುಮಾರ್ ಅವರನ್ನು ಸಂಸ್ಥೆಯ ರಾಯಭಾರಿಯನ್ನಾಗಿ ನೇಮಕ ಮಾಡಿರುವುದಕ್ಕೆ ಹೆಚ್ಚು ಉಪಯೋಗವಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟರು. ಸೆಪ್ಟೆಂಬರ್ 26ರಂದು ಬೆಂಗಳೂರು ಡಿಕೆನ್ಸನ್ ರಸ್ತೆಯಲ್ಲಿ ಶಿವರಾಜ್ ಕುಮಾರ್ ಹೊಸ ಮಳಿಗೆಯನ್ನು ಆರಂಭಿಸಲಿದ್ದಾರೆ ಎಂದರು.
ಕಲ್ಯಾಣ್ ಜ್ಯೂವೆಲರ್ಸ್ ಜೊತೆ ಕೆಲಸ ಮಾಡುತ್ತಿರುವುದು ತುಂಬ ಸಂತಸ ತಂದಿದೆ ಎಂದು ಸಂಸ್ಥೆಯ ರಾಯಭಾರಿ ಶಿವರಾಜ್ ಕುಮಾರ್ ಹೇಳಿದ್ದಾರೆ. ಕಲ್ಯಾಣ್ ಜ್ಯೂವೆಲರಿ ರು.2,500ಕೋಟಿ ವ್ಯವಹಾರ ನಡೆಸುತ್ತ್ತಿರುವುದಾಗಿ ತಿಳಿಸಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ರಾಜೇಶ್ ಕಲ್ಯಾಣ್, ರಮೇಶ್ ಕಲ್ಯಾಣ್ ಉಪಸ್ಥಿತರಿದ್ದರು.


Click it and Unblock the Notifications











