ಮಾತು ಮುಗಿಸಿದ ಹ್ಯಾಟ್ರಿಕ್ ಹೀರೋ ಮೈಲಾರಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ನಾಲ್ಕು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ ಎಂದು ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ. ಆರ್.ಎಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀನಿವಾಸ್ ಅವರು ಅರ್ಪಿಸಿ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ಚಿತ್ರ.
'ತಾಜ್‌ಮಹಲ್', 'ಪ್ರೇಮ್‌ಕಹಾನಿ' ಚಿತ್ರಗಳ ನಂತರ ಚಂದ್ರು ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕನಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ವಿಶಿಷ್ಟ ಕಥೆ ಹೊಂದಿರುವ 'ಮೈಲಾರಿ' ಚಿತ್ರರಸಿಕರ ಮನಸೂರೆಗೊಳ್ಳಲಿದೆ ಎನ್ನುತ್ತಾರೆ ನಿರ್ದೇಶಕರು. ಗುರುಕಿರಣ್ ಸಂಗೀತ ಸಂಯೋಜನೆಯಿರುವ 'ಮೈಲಾರಿ'ಗೆ ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್ ಕಲಾ ನಿರ್ದೇಶನವಿದೆ.
ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಸದಾ, ರವಿಕಾಳೆ, ರಂಗಾಯಣರಘು, ಗುರುಪ್ರಸಾದ್(ಮಠ), ಜಾನ್‌ಕೊಕೇನ್, ಸುರೇಶ್‌ಮಂಗಳೂರು, ರಾಜುತಾಳಿಕೋಟೆ, ಬುಲೆಟ್‌ಪ್ರಕಾಶ್, ಮೈಕೋನಾಗರಾಜ್, ಕುರಿ ಪ್ರತಾಪ್, ರಘುರಾಂ, ಕೋಟೆಪ್ರಭಾಕರ್, ವಿಶ್ವ ಮುಂತಾದವರಿದ್ದಾರೆ.


Click it and Unblock the Notifications











