For Quick Alerts
  ALLOW NOTIFICATIONS  
  For Daily Alerts

  ತಿರುಪತಿಯಲ್ಲಿ ತಾರೆ ತಮನ್ನಾ ಗೋವಿಂದಾಯ ನಮಃ

  By Rajendra
  |

  ಈ ಹಿಂದೊಮ್ಮೆ ಟೈಟ್ ಜೀನ್ಸ್‌ನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಚಿತ್ರೀಕರಣದಲ್ಲಿದ್ದ ಕಾರಣ ಜೀನ್ಸ್‌ನಲ್ಲಿ ಬರಬೇಕಾಯಿತು ಎಂದು ಬಳಿಕ ಕ್ಷಮೆಯಾಚಿಸಿದ್ದರು. ಈಗ ಸಾಂಪ್ರದಾಯಿಕವಾಗಿ ಸೀರೆಯುಟ್ಟು ಕುಟುಂಬ ಸಮೇತ ತಿರುಪತಿಗೆ ಆಗಮಿಸಿದ್ದರು.

  ಮುಂಜಾನೆಯೇ ತಿರುಪತಿಗೆ ಭೇಟಿ ನೀಡಿದ ತಮನ್ನಾ, ತಿಮ್ಮಪ್ಪನಿಗೆ ಸುಪ್ರಭಾತ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವರ್ಷದ ಹಿಂದೆಯೇ ಫ್ಯಾಮಿಲಿ ಸಮೇತ ತಿರುಪತಿಗೆ ಬಂದಿದ್ದರಂತೆ. ಈಗ ಮತ್ತೊಮ್ಮೆ ತಿಮ್ಮಪ್ಪನ ಹರಕೆ ತೀರಿಸಿದ್ದಾರೆ.

  ಸದ್ಯಕ್ಕೆ ಟಾಲಿವುಡ್‌ನಲ್ಲಿ ತಮನ್ನಾ ಟಾಪ್‌ನಲ್ಲಿದ್ದಾರೆ. ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಅವರೊಂದಿಗಿನ ರಚ್ಚ ಎಂಬ ಚಿತ್ರದಲ್ಲಿದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅತ್ತ ತಮಿಳು ಚಿತ್ರರಂಗದಲ್ಲೂ ಆಫರ್‌ಗಳು ಹೇರಳವಾಗಿವೆ. (ಏಜೆನ್ಸೀಸ್)

  English summary
  The last visit of Tamanna Bhatia to the holy town Tirupathi had raised eye brows, as she was wearing denims that had irked the devotees, who saw her in a glamorous outfit at the temple premises.
  Tuesday, February 7, 2012, 13:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X