»   »  ದರ್ಶನ್ ರಿಂದ ಹೊರಾಂಗಣ ಚಿತ್ರೀಕರಣ ಘಟಕ

ದರ್ಶನ್ ರಿಂದ ಹೊರಾಂಗಣ ಚಿತ್ರೀಕರಣ ಘಟಕ

Posted By:
Subscribe to Filmibeat Kannada
Toogudeepa Production start outdoor unit
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಪುತ್ರೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಖುಷಿಯ ನಡುವೆಯೇ ಅವರ ಕುಟುಂಬ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದು ಹೊರಾಂಗಣ ಚಿತ್ರೀಕರಣ ಘಟಕವನ್ನು ಆರಂಭಿಸಿತು. ಈ ಮೂಲಕ ವೃತ್ತಿಜೀವನದಲ್ಲಿ ದರ್ಶನ್ ಮತ್ತೊಂದು ಮಜಲನ್ನು ತಲುಪಿದ್ದಾರೆ.

ಕಳೆದ ಶನಿವಾರ (ಏಪ್ರಿಲ್ 4) ತೂಗುದೀಪ ಕುಟುಂಬದ ರು.3.5 ಕೋಟಿ ವೆಚ್ಚದಲ್ಲಿ 'ತೂಗುದೀಪ ಔಟ್ ಡೋರ್ ಪ್ರೊಡಕ್ಷನ್' ಆರಂಭಿಸಿತು. ಕ್ರೇನ್ ಹೊರತುಪಡಿಸಿದರೆ ಹೊರಾಂಗಣ ಚಿತ್ರ ನಿರ್ಮಾಣಕ್ಕೆ ಬೇಕಾದ ಸಕಲ ಸೌಲಭ್ಯಗಳು ಈ ಘಟಕದಲ್ಲಿ ಲಭ್ಯ. ಚಿತ್ರೀಕರಣಕ್ಕೆ ಬೇಕಾದ ಅತ್ಯಾಧುನಿಕ 435 ಕ್ಯಾಮೆರಾ ಹೊಂದಿದ ಎರಡನೆ ಸಂಸ್ಥೆ ಎಂಬ ಹೆಗ್ಗ್ಗಳಿಕೆಗೂ ತೂಗುದೀಪ ಪ್ರೊಡಕ್ಷನ್ಸ್ ಪಾತ್ರವಾಗಿದೆ. ರಾಜ್ ಕುಮಾರ್ ಕುಟುಂಬದ ಪೂರ್ಣಿಮಾ ಎಂಟರ್ ಪ್ರೈಸಸ್ ಈ ರೀತಿಯ ಅತ್ಯಾಧುನಿಕ ಕ್ಯಾಮೆರಾ ಹೊಂದಿದ ಮತ್ತೊಂದು ಸಂಸ್ಥೆ.

435 ಕ್ಯಾಮೆರಾ ವಿಶೇಷತೆಗಳೆಂದರೆ, ಇದನ್ನು ಜರ್ಮನಿಯಲ್ಲಿ ತಯಾರಿಸಲಾಗಿದ್ದು ರಾಷ್ಟ್ರೀಯ ಮಾನದಂಡಗಳನ್ನು ಒಳಗೊಂಡಅತ್ಯಾಧುನಿಕ ಕ್ಯಾಮೆರಾ ಎಂಬ ಹಣೆಪಟ್ಟಿ ಹೊತ್ತಿದೆ. ದರ್ಶನ್ ಕುಟುಂಬದ ಸಮ್ಮುಖದಲ್ಲಿ ಹೊರಾಂಗಣ ಚಿತ್ರೀಕರಣ ಘಟಕಕ್ಕೆ ಶನಿವಾರ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದರ್ಶನ್ ನಟಿಸುತ್ತಿರುವ 'ಪೊರ್ಕಿ' ಚಿತ್ರದ ಮೊದಲ ಸನ್ನಿವೇಶವನ್ನು 435 ಕ್ಯಾಮೆರಾದಲ್ಲಿ ಸೆರೆಹಿಡಿಯಲಾಯಿತು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೊರ್ಕಿಯಾಗಿ ದರ್ಶನ್,ಏಪ್ರಿಲ್‌ನಿಂದ ಚಿತ್ರೀಕರಣ
ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!
ದರ್ಶನ್ ಪಶ್ಚಾತ್ತಾಪ ಜಯಮಾಲಾ ಅಯ್ಯೋ ಪಾಪ!
ದರ್ಶನ್ ಗೆ ನಾನೇನು ಅನ್ಯಾಯ ಮಾಡಿದ್ದೇನೆ?
ಬಾಸ್ ದರ್ಶನ್ ಗೆ ಹುಟ್ಟುಹಬ್ಬದ ಶುಭಾಶಯಗಳು!
ದರ್ಶನ್‌ ವಿಶ್ವರೂಪ ದರ್ಶನ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada