ನಡುಬೀದಿ ನಾರಾಯಣನ ಕಂಡರೆ ತ್ರಿಷಾಗೆ ತುಂಬ ಇಷ್ಟ
ಮೋಹಕ ತಾರೆ ತ್ರಿಷಾ ಕೃಷ್ಣನ್‌ಗೆ ನಡುಬೀದಿ ನಾರಾಯಣ (ಬೀದಿ ನಾಯಿ) ಕಂಡರೆ ಅಪ್ಪಿ ಮುದ್ದಾಡುವಷ್ಟು ಇಷ್ಟ. ನಡುಬೀದಿ ನಾರಾಯಣ ಅಷ್ಟೇ ಅಲ್ಲ ಪ್ರಾಣಿಗಳೆಂದರೂ ಎಲ್ಲಿಲ್ಲದ ಅಕ್ಕರೆ. ಜಾಗತಿಕ ಪ್ರಾಣಿ ದಯಾ ಸಂಘದ (ಪೆಟಾ) ಕಾರ್ಯಕರ್ತೆಯೂ ಹೌದು. ಇತ್ತೀಚೆಗೆ ಆಕೆ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ಪೆಟಾ ಜಾಹೀರಾತಿನ ಮೂಲಕ ವಿನಂತಿಸಿಕೊಂಡಿದ್ದಾರೆ.
ಬೀದಿನಾಯಿಯೊಂದನ್ನು ಅಪ್ಪಿ ಕೊಂಡು ಮುದ್ದಾಗಿ ವಿನಂತಿಸಿಕೊಂಡಿದ್ದಾರೆ. ತ್ರಿಷಾ ದತ್ತು ತೆಗೆದುಕೊಂಡಿರುವ ಬೀದಿ ನಾಯಿಗೆ 'ಬಂಬಿ' ಎಂದು ಹೆಸರಿಡಲಾಗಿದೆ. ಈ ನಾಯಿಯನ್ನು ಶಾಲಾ ಮಕ್ಕಳು ಕಲ್ಲಿನಿಂದ ಹೊಡೆಯಲು ಮುಂದಾಗಿದ್ದರು. ಯಾರೋ ದಾರಿಹೋಕನೊಬ್ಬ ನಾರಾಯಣನಂತೆ ಬಂದು ಅದನ್ನು ಅಪಾಯದಿಂದ ಪಾರುಮಾಡಿದ್ದ.
ಹೈದರಾಬಾದಿನಲ್ಲಿ ಒಮ್ಮೆ ಕಾರಿನಲ್ಲಿ ಹೋಗಬೇಕಾದರೆ, ನಾಯಿ ಮರಿಯೊಂದು ಅನಾಥವಾಗಿ ಮಳೆಯಲ್ಲಿ ನೆನೆಯುತ್ತಿತ್ತು. ಅದರ ಕಾಲಿಗೆ ಗಾಯವಾಗಿ ಮಳೆಯಲ್ಲಿ ನೆನೆಯುತ್ತಾ ನರಳುತ್ತಿತ್ತು. ಅದಕ್ಕೆ ಕ್ಯಾಡ್‌ಬರಿ ಎಂದು ಹೆಸರಿಟ್ಟಿದ್ದೇನೆ. ಈಗವನು ನನಗೆ ಮಗ ಇದ್ದಂತೆ. ಈ ರೀತಿಯ ಮಗನನ್ನು ನಾನು ಯಾವತ್ತೂ ಕಂಡಿಲ್ಲ ಎನ್ನುತ್ತಾರೆ ತ್ರಿಷಾ. (ಏಜೆನ್ಸೀಸ್)


Click it and Unblock the Notifications











