ಹರಿಕೃಷ್ಣ, ರವಿವರ್ಮ ಹಾಗೂ ಬಾಬು ತ್ರಿವೇಣಿ ಸಂಗಮ

By * ಚಿತ್ರಗುಪ್ತ

'ಗುಬ್ಬಿ' ರವಿವರ್ಮ ನಿರ್ದೇಶನದ ಹೊಸ ಚಿತ್ರಕ್ಕೆ ಸಂಗೀತ ನಿರ್ದೇಶಕರಾಗಿ ಹರಿಕೃಷ್ಣ ಫೈನಲ್ ಆಗಿದ್ದಾರೆ. ಅಜಯ್‌ರಾವ್ ನಾಯಕನಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ಎಸ್.ವಿ.ಬಾಬು ನಿರ್ಮಾಪಕರು. ಈ ಹಿಂದೆ ಇದೇ ರವಿವರ್ಮ ಮತ್ತು ಬಾಬು ತಂಡ 'ಸಂಗಮ' ಸಿನಿಮಾ ಮಾಡಿತ್ತು. ಅದು ಐವತ್ತು ದಿನವನ್ನು ಯಶಸ್ವಿಯಾಗಿ ಪೂರೈಸಿತ್ತು.

ಆದರೆ, ಅದೇ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದ ದೇವಿಶ್ರೀ ಪ್ರಸಾದ್ ಸಂಗೀತ ಅದ್ಯಾಕೋ ಕನ್ನಡಿಗರಿಗೆ ಇಷ್ಟವಾಗಿರಲಿಲ್ಲ. ದೇವಿಶ್ರೀ ತೆಲುಗಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕರಾಗಿದ್ದರೂ 'ಆರ್ಯ'ದಂಥ ಹಿಟ್ಟಾನುಹಿಟ್ ಚಿತ್ರಗಳನ್ನು ಕೊಟ್ಟಿದ್ದರೂ ನಮ್ಮಲ್ಲಿನ ಜನ ಅದ್ಯಾಕೋ ಅವರ ಢಂಕಣಕ ಹಾಡುಗಳನ್ನು ಇಷ್ಟಪಡಲಿಲ್ಲ.

ಈ ಬಾರಿ ದೇವಿಶ್ರೀ ಪ್ರಸಾದ್ ಅವರನ್ನು ಕೈ ಬಿಟ್ಟು, ಸದ್ಯದ ಕನ್ನಡದ ನಂಬರ್ ಒನ್ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಜೊತೆ ರವಿವರ್ಮ ಕೈ ಜೋಡಿಸಿದ್ದಾರೆ. ಅಂದಹಾಗೇ ಎಸ್.ವಿ.ಬಾಬು ಅವರು ಶಿವಮಣಿಯವರ 'ಗೋಕಾಕ್' ಸಿನಿಮಾದಿಂದ ಹೊರಬಂದು, ಮತ್ತೆ ರವಿವರ್ಮರಿಗೆ ಆಫರ್ ಕೊಟ್ಟಿದ್ದಾರೆ!ಈ ಬಾರಿಯೂ ಈ ಜೋಡಿ ಗೆಲ್ಲುತ್ತಾ? ಅಜಯ್‌ರಾವ್‌ಗೆ ಬ್ರೇಕ್ ಸಿಗುತ್ತಾ ಎನ್ನುವುದು ಮುಂದಿರುವ ಪ್ರಶ್ನೆ...

More from Filmibeat

English summary
Gubbi fame Ravi Varma and music director V Harikrishna join together in a Ajay Rao lead film. The untitled movie is produced by S V Babu. Earlier, Ravi Varma and S V Babu jointly made a film Sangama, the film completed 50 days. Now the trio S V Babu, V Harikrishna and Ravi Varma join together.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X