»   » ಜೋಗಿ, ವಿನುಬಳಂಜ , ಆನಂದೂರರ ಜೋಗುಳ

ಜೋಗಿ, ವಿನುಬಳಂಜ , ಆನಂದೂರರ ಜೋಗುಳ

Subscribe to Filmibeat Kannada

ಈಟಿವಿಯಲ್ಲಿ ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯನ್ನು ನಿರ್ದೇಶಿಸಿ ಎಲ್ಲ ವರ್ಗದ ಪ್ರೇಕ್ಷಕರಿಂದ ಸೈ ಎನಿಸಿಕೊಂಡ ಪ್ರತಿಭಾವಂತ ನಿರ್ದೇಶಕ ವಿನು ಬಳಂಜ ಈಗ ಮತ್ತೊಂದು ಮೆಗಾ ಸಿರಿಯಲ್ ನೀಡಲು ತಯಾರಿ ನಡೆಸಿದ್ದಾರೆ. ಕ್ರಿಯಾಶೀಲ ತಂಡದೊಡನೆ ಈಗ 'ಜೋಗುಳ" ಎಂಬ ಧಾರಾವಾಹಿಯನ್ನು ಜೀ ಕನ್ನಡಟೀವಿ ವಾಹಿನಿಗಾಗಿ ನಿರ್ದೇಶಿಸುತ್ತಿದ್ದಾರೆ.

ಪ್ರೀತಿ ಇಲ್ಲದಮೇಲೆ ಧಾರಾವಾಹಿಯಲ್ಲಿ ಜಡ್ಜ್ ಅನಂತ್ ನಾಗ್, ಅಜ್ಜಿ ಬಿ ಜಯಶ್ರೀ, ಲಾಯರ್ ಗಳಾಗಿ ಅಚ್ಯುತ್ ಕುಮಾರ್, ದಿಲೀಪ್ ರಾಜ್ ಮನೋಜ್ಞ ಅಭಿನಯ ನೀಡಿದ್ದರು. ಇದಲ್ಲದೆ ಹೆಂಗಳೆಯರನ್ನು ಸೆಳೆದಿದ್ದು ಅತ್ತಿಗೆ ಪದ್ಮಜಾರಾವ್ ಪಾತ್ರ. ಅವರಿಗೆ ಅಪರ್ಣಾ, ಶೃತಿ ನಾಯ್ಡು ಪೈಪೋಟಿ ನೀಡಿದ್ದರು. ಯುವ ಪೀಳಿಗೆಗೆ ಯಶ್ ಹಾಗೂ ದೀಪು ನಟನೆ ಹಿಡಿಸಿತು. ಎಲ್ಲಕ್ಕಿಂತ ಹೆಚ್ಚಾಗಿ ಅನಂತ್ ಗೆ ಸರಿಸಾಟಿಯಾಗಿ ಖಳ ಪಾತ್ರದಲ್ಲಿ ಸುರೇಶ್ ಮಂಗಳೂರು ಹಾಗೂ ಮಹಿಮಾ ಪಾತ್ರದಲ್ಲಿ ನಿಜಕ್ಕೂ ಅದ್ಭುತ ಅಭಿನಯ ನೀಡಿದ್ದರು. ಈ ಧಾರಾವಾಹಿಗಾಗಿ ಖ್ಯಾತ ಬರಹಗಾರ ಜೋಗಿ ಅವರು ಬರೆದಿದ್ದ ಡೈಲಾಗುಗಳ ಎಲ್ಲರ ಮನ ಗೆದ್ದಿತ್ತು.

ಜೋಗಿ ಮತ್ತೆ ವಿನು ಬಳಂಜರ ಜೊತೆ ಜೋಗುಳ ಹಾಡಲಿದ್ದಾರೆ. ಈ ತಂಡಕ್ಕೆ ಮತ್ತೊಬ್ಬ ಕ್ರಿಯಾಶೀಲ ಅನುಭವಿ ಬರಹಗಾರ, ನಿರ್ದೇಶಕ ಸತ್ಯಮೂರ್ತಿ ಆನಂದೂರು ಜತೆಗೂಡಿದ್ದಾರೆ.

ಕನ್ನಡಪ್ರಭದ ಜೋಗಿ ಅವರ ಈ ಟಿವಿಯ 'ಬಂದೇ ಬರುತಾವ ಕಾಲ' ಧಾರಾವಾಹಿ ನೋಡುಗರ ಆಸಕ್ತಿ ಕೆರಳಿಸುತ್ತಿದೆ. ಲಂಕೇಶ್ ಬಳಗದ ಲೇಖಕ ಸತ್ಯಮೂರ್ತಿ ಆನಂದೂರು ಅವರು 'ಸಹನಾ' ಧಾರಾವಾಹಿಯ ಯಶಸ್ಸಿನ ನಂತರ ಕಿರುತೆರೆ ವಲಯದಲ್ಲಿ ಮತ್ತೊಂದು ಚೆಂದದ ಸೀರಿಯಲ್ ನೀಡಲು ಮುಂದಾಗಿದ್ದಾರೆ.

ಸತ್ಯ ಮೂರ್ತಿ ಸಂಭಾಷಣೆಯಿರುವ ಧಾರಾವಾಹಿಯೆಂದರೆ, ಅವರ ಲಯಬದ್ಧ ಮಾತುಗಳು, ಮನಸ್ಸಿಗೆ ಹತ್ತಿರವಾಗುವ ಸಂಭಾಷಣೆ ಇದ್ದೇ ಇರುತ್ತದೆ. ಈ ಮೂವರ ಸಂಗಮದ ಜತೆಗೆ ಮಂಜುನಾಥ್ ಹೆಗಡೆ, ನಂದಿನಿ ಆರ್ಯನ್,ಸುಂದರಶ್ರೀ ಅವರ ಅಭಿನಯ ಜನರಿಗೆ ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ.

(ದಟ್ಸ್ ಕನ್ನಡ ಕಿರುತೆರೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada