»   » ‘ದೇವದಾಸ್‌’ನ ಸಂಗೀತ ಹಾಗೂ ಬಣ್ಣದೋಕುಳಿ ಪಾಶ್ಚಾತ್ಯರ ಮನಸ್ಸಲ್ಲಿ ಕಾಮನಬಿಲ್ಲು ಮೂಡಿಸೋದು ಗ್ಯಾರಂಟಿ ಎನ್ನುವ ಮಾಧುರಿ ಆಸ್ಕರ್‌ ಕನಸು ಕಾಣುತ್ತಿದ್ದಾರೆ.

‘ದೇವದಾಸ್‌’ನ ಸಂಗೀತ ಹಾಗೂ ಬಣ್ಣದೋಕುಳಿ ಪಾಶ್ಚಾತ್ಯರ ಮನಸ್ಸಲ್ಲಿ ಕಾಮನಬಿಲ್ಲು ಮೂಡಿಸೋದು ಗ್ಯಾರಂಟಿ ಎನ್ನುವ ಮಾಧುರಿ ಆಸ್ಕರ್‌ ಕನಸು ಕಾಣುತ್ತಿದ್ದಾರೆ.

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಐದು ತಿಂಗಳ ಗರ್ಭಿಣಿ ಮಾಧುರಿ ದೀಕ್ಷಿತ್‌ ತಾಯ್ತನದ ಸುಖವನ್ನು ಈಗಾಗಲೇ ಅನುಭವಿಸುತ್ತಿದ್ದಾರೆ. ಅಮೆರಿಕ ಗಂಡ. ಆತ ಡಾಕ್ಟರ್‌ ಅನ್ನೋದು ಬೋನಸ್ಸು. ಹೀಗಾಗಿ ಆರೋಗ್ಯದ ಚಿಂತೆಯೇ ಇಲ್ಲ. ಮನಸ್ಸು ನಿರಾಳ.

ತಣ್ಣನೆಯ ಸಂಜೆ ಮಾಧುರಿಗೆ ನೆನಪಾಗೋದು ‘ದೇವದಾಸ್‌’ ಚಿತ್ರದ ಬಣ್ಣದೋಕುಳಿ. ಧಾಂಧೂಂ ಸೆಟ್ಟುಗಳು. ಓಕುಳಿಯಂತೆ ಕಾಣುವ ಶರಾಬು. ಅದನ್ನು ಹಿಡಿದ ದೇವದಾಸ. ತಾನು ಚಂದ್ರಮುಖಿಯಾಗಿ ಕುಣಿಯುತ್ತಾ ಹಾಡಿದ ‘ಮಾರ್‌ಡಾಲಾ..’. ಮಾಧುರಿ ಮನಸ್ಸಿನಲ್ಲಿ ದೇವದಾಸ್‌ ಹಾಡುಗಳು ಪದೇಪದೇ ಗುನುಗುತ್ತವಂತೆ. ಆ ಕಾರಣಕ್ಕೇ ‘ದೇವದಾಸ್‌’ ಚಿತ್ರಕ್ಕೆ ಆಸ್ಕರ್‌ ಸಿಗೋದು ಗ್ಯಾರಂಟಿ ಅನ್ನೋದು ಮಾಧುರಿ ವಾದ. ಈ ವಾದದ ವಿಸ್ತುತ ರೂಪ ಹೀಗಿದೆ-

‘ಪಾಶ್ಚಿಮಾತ್ಯ ದೇಶಗಳ ಸಿನಿಮಾ ನಿರ್ದೇಶಕರಿಗೆ ಸಂಗೀತದ ಬಗ್ಗೆ ಪ್ರೀತಿ ಜಾಸ್ತಿ. ಎರಡು ಹಾಡಿರುವ ಚಿತ್ರಗಳನ್ನೇ ಅಲ್ಲಿ ಮ್ಯೂಸಿಕಲ್‌ ಅಂತ ಪರಿಗಣಿಸಿ, ಹೆಚ್ಚು ಮನಸ್ಸಿಟ್ಟು ನೋಡುತ್ತಾರೆ. ಇನ್ನು ‘ದೇವದಾಸ್‌’ ಚಿತ್ರಕ್ಕೆ ಇಸ್ಮಾಯಿಲ್‌ ದರ್ಬಾರ್‌ ಕೊಟ್ಟಿರುವ ಸಂಗೀತಕ್ಕೆ ಪಾಶ್ಚಿಮಾತ್ಯರು ಬೋಲ್ಡಾಗುವುದರಲ್ಲಿ ಅನುಮಾನವೇ ಇಲ್ಲ. ಗುರಿಂದರ್‌ ಚಡ್ಡಾರ ‘ಬೆಂಡಿಟ್‌ ಲೈಕ್‌ ಬೆಕ್ಹಾಮ್‌’ನಂಥಾ ಭಾರತೀಯ ಚಿತ್ರಗಳ ಬಗ್ಗೆ ಅಮೆರಿಕನ್ನರಿಗೆ ಆಸಕ್ತಿ ಹೆಚ್ಚಾಗಿದೆ. ಭಾರತೀಯ ಚಿತ್ರಗಳನ್ನು ನೋಡುವ ಪಾಶ್ಚಾತ್ಯರ ದೃಷ್ಟಿಕೋನವೇ ಈಗ ಬದಲಾಗಿದೆ. ಟೈಮ್‌ ಉತ್ತಮ ಚಿತ್ರಗಳ ಪಟ್ಟಿಯಲ್ಲಿ ದೇವದಾಸ್‌ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ದೇವದಾಸ್‌ಗೆ ಆಸ್ಕರ್‌ ಬರುವುದರಲ್ಲಿ ಅನುಮಾನವೇ ಇಲ್ಲ’.

ಆಸ್ಕರ್‌ ಕನಸಿನ ಗುಂಗಲ್ಲೇ ಇದ್ದ ಮಾಧುರಿಗೆ, ‘ನೀವು ಅಮ್ಮ ಆದ ನಂತರ ಸಿನಿಮಾಗೆ ಗುಡ್‌ ಬೈ ಹೇಳ್ತೀರಂತೆ...’ ಅಂತ ಪ್ರಶ್ನಿಸಿದಾಗ, ‘ನಾನು ಮದುವೆಯಾದಾಗಲೂ ಇಂಥವೇ ಸುದ್ದಿಗಳು ಹಬ್ಬಿದ್ದವು. ಪಾತ್ರಗಳ ಆಯ್ಕೆಯಲ್ಲಿ ಚೂಸಿಯಾಗಿದ್ದೇನೆಯೇ ವಿನಃ ನನ್ನ ಮತ್ತು ಸಿನಿಮಾ ಸಂಬಂಧ ತಣ್ಣಗೆ ಕೊನೆಯಾಗುವುದಿಲ್ಲ ’ ಎಂದು ಮಾಧುರಿ ಮುಗುಳ್ನಕ್ಕರು.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada