»   » ಬಾಂಡ್‌ ಸಂಸ್ಕೃತಿಯಾಂದಿಗೆ ಬೆಸುಗೆಯಾಗಲೊಲ್ಲದ ಕರಾವಳಿ ಕನ್ಯೆ

ಬಾಂಡ್‌ ಸಂಸ್ಕೃತಿಯಾಂದಿಗೆ ಬೆಸುಗೆಯಾಗಲೊಲ್ಲದ ಕರಾವಳಿ ಕನ್ಯೆ

Subscribe to Filmibeat Kannada

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಾಲಿವುಡ್‌ನಿಂದ ಹಾಲಿವುಡ್ಡಿಗೇರಿದ ಸುದ್ದಿ ಕಾವೇರುವ ಮುನ್ನವೇ ತಣ್ಣಗಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. 007 ಚಿತ್ರದ ಚಿತ್ರೀಕರಣದಲ್ಲಿ ನಾಯಕ ಪಿಯರ್ಸ್‌ ಬ್ರಾಸ್ನನ್‌ ಜೊತೆ ಲೈಂಗಿಕ ದೃಶ್ಯಗಳಲ್ಲಿ ‘ಭಾಗಿಯಾಗಲು ಒಲ್ಲೆ’ ಎಂದು ನಿರಾಕರಿಸುವ ಮೂಲಕ ದಕ್ಷಿಣ ಕನ್ನಡದ ಹುಡುಗಿಯಾಬ್ಬಳು ‘ಬಾಂಡ್‌ ಬೆಡಗಿ’ ಯಾಗುವ ಸಾಧ್ಯತೆಗಳು ಕ್ಷೀಣವಾಗಿದೆ.

ಪಿಯರ್ಸ್‌ ಬ್ರಾಸ್ನನ್‌, ರೈಯನ್ನು ಯಾವುದೋ ಒಂದು ಸಮಾರಂಭದಲ್ಲಿ ನೋಡಿ ಮಾತನಾಡಿದ್ದರು. ಹಿಂದೊಮ್ಮೆ ಟೈಂ ಪತ್ರಿಕೆಯ ಮುಖಪುಟದಲ್ಲಿ ಆಕೆಯನ್ನು ನೋಡಿದ್ದರಂತೆ. ಅವರೊಡನೆ ಆವತ್ತು ಆಕೆ ಅಗತ್ಯಕ್ಕಿಂತ ಜಾಸ್ತಿ ಮಾತನಾಡಿರಲಿಲ್ಲ. ಆವತ್ತಿನ ಮಾತುಕತೆಯ ಸಾರಾಂಶವೆಂದರೆ ಅಂತಿಮವಾಗಿ ತಮ್ಮ ಮುಂದಿನ ಬಾಂಡ್‌ ಚಿತ್ರದಲ್ಲಿ ನಿನಗೊಂದು ಅವಕಾಶ ಕೊಡುವೆ ಎಂದು ಪಿಯರ್ಸ್‌ ಹೇಳಿದ್ದರಷ್ಟೆ.

ಜಾಗತಿಕ ಸಿನಿಮಾ ಅಂಗಳದಲ್ಲಿ ಮಿಂಚುವ ಅವಕಾಶವೇನೋ ದೊಡ್ಡದೆ.. ಆದರೆ ಅದು ರೈ ಪಾಲಿಗೆ ನನಸಾಗುವಂತೆ ಕಾಣುತ್ತಿಲ್ಲ. ಯಾಕೆಂದರೆ ರೈಗೆ ಮೈಚೆಲ್ಲಿ ನಟಿಸುವ ಪಾತ್ರಗಳಲ್ಲಿ ಇಷ್ಟವಿಲ್ಲ. ಅಂಥ ದೃಶ್ಯಗಳನ್ನು ಅಳವಡಿಸುವುದಾದರೆ ನಾನು ಒಲ್ಲೆ ಎಂದು ರೈ ಸ್ಪಷ್ಟಪಡಿಸಿದ್ದಾಳೆ. ‘ ಅಂಥ ದೃಶ್ಯಗಳಿಗೆ ಕತ್ತರಿ ಹಾಕಿ ಅಥವಾ ಡ್ಯೂಪ್‌ ಬಳಸಿ’ ಎನ್ನುವುದು ಐಶ್ವರ್ಯಳ ಸಲಹೆ. ಯಾವ ಕಾರಣಕ್ಕೂ ನನ್ನ ಸಂಸ್ಕೃತಿ ಮತ್ತು ಇತಿಮಿತಿಗಳನ್ನು ಮೀರಲಾರೆ ಎಂದು ಬ್ರಿಟಿಷ್‌ ಪತ್ರಿಕೆಯಾಂದಿಗೆ ಹರಟುತ್ತಾ ತನ್ನ ನಿಲುವನ್ನು ಘೋಷಿಸಿದ್ದಾಳೆ.

ಬಾಂಡ್‌ ಚಿತ್ರದಲ್ಲಿ ನಟಿಸುವದನ್ನು ರೈ ಕೈ ಬಿಟ್ಟರೆ ಅದಕ್ಕೆ ನಾವಲ್ಲದೇ ಇನ್ನಾರು ಸೈ? ಎಂದು ಕೇಳುತ್ತಿದ್ದಾರೆ ಇನ್ನಿಬ್ಬರು ವಿಶ್ವ ಸುಂದರಿಯರಾದ ಪ್ರಿಯಾಂಕ ಛೋಪ್ರಾ ಮತ್ತು ಲಾರಾ ದತ್ತಾ. ಈಗ ನಮ್ಮ ಪ್ರಶ್ನೆಯೆಂದರೆ ಈ ಹುಡುಗಿಯರೂ ರೈ ಥರ ಒಲ್ಲೆ ಒಲ್ಲೆ ಎನ್ನುತ್ತಾರೋ ಅಥವಾ ನಿರ್ಮಾಪಕ ಹೇಳಿದಂತೆ ಕುಣಿಯುತ್ತಾರೋ.. ಕಾದು ನೋಡಬೇಕು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada