»   » ಕಾವಿಧಾರಿಯಾಗಿ ಡೈಲಾಗ್‌ಕಿಂಗ್‌ ಸಾಯಿಕುಮಾರ್‌!

ಕಾವಿಧಾರಿಯಾಗಿ ಡೈಲಾಗ್‌ಕಿಂಗ್‌ ಸಾಯಿಕುಮಾರ್‌!

Subscribe to Filmibeat Kannada

ಸಾಯಿಕುಮಾರ್‌ ಮತ್ತೆ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಆದರೆ ಈ ಸಲ ಖಾಕಿ-ಖಾದಿ ಪಾತ್ರಗಳಲ್ಲಿ ಅವರು ನಟಿಸುತ್ತಿಲ್ಲ! ಕಾವಿ ಪಾತ್ರದಲ್ಲಿ ಸಾಯಿ ಕಾಣಿಸಲಿದ್ದಾರೆ. ಇದೊಂದು ಕಾವಿ ಚಿತ್ರ. ಚಿತ್ರದ ಹೆಸರು ‘ಕೈವಾರ ಶ್ರೀ ತಾತಯ್ಯ’.

ಕನ್ನಡದಲ್ಲಿ ತಯಾರಾದ ಸಂತರ ಚಿತ್ರಗಳ ಸಾಲಿಗೆ ಇದು ಹೊಸಸೇರ್ಪಡೆ. ತಾರಾ, ಕರಿಬಸವಯ್ಯ, ವಿಷ್ಣುಕಾಂತ್‌, ಎಂ.ಪಿ.ಶಂಕರ್‌ ತಾರಾಗಣದಲ್ಲಿದ್ದಾರೆ. ರಂಗಾಯಣ, ನಿನಾಸಂ, ತಿರುಗಾಟ ರಂಗ ತಂಡದ 20 ವಿದ್ಯಾರ್ಥಿಗಳು ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್‌ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ಒಪ್ಪಿದ್ದಾರೆ. ವಿ.ರಾಮು ನಿರ್ಮಾಣದ ‘ಕೈವಾರ ಶ್ರೀ ತಾತಯ್ಯ’ ಚಿತ್ರದ ಕತೆ ಬರೆದವರು ರಾಧಕೃಷ್ಣ. ಹಂಸಲೇಖ ಸಂಗೀತ ನೀಡಲಿದ್ದು, ಗೋಟೂರಿ ಸಂಭಾಷಣೆ ಚಿತ್ರಕ್ಕಿದೆ.

ಬಾಗೇಪಲ್ಲಿ, ಕೊತ್ತಪಲ್ಲಿ ಗುಮ್ಮ ನಾಯಕ ಕೋಟೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಮತ್ತು ಕೈವಾರದಲ್ಲಿ , ಜ.20ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ.

ಒಂದಿಷ್ಟು ಸಾಯಿಕುಮಾರ್‌ ಕತೆ : ‘ಪೊಲೀಸ್‌ ಸ್ಪೋರಿ’ ಚಿತ್ರದಿಂದ ತಮ್ಮದೇ ಆದ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಸಾಯಿಕುಮಾರ್‌, ನಂತರ ಅಂತಹದೇ ಹತ್ತಾರು ಪೊಲೀಸ್‌ ಸ್ಟೋರಿಗಳನ್ನು ಪ್ರೇಕ್ಷಕರ ಮುಂದಿಟ್ಟರು. ಖಾಕಿ ಅಬ್ಬರದಿಂದ ಕಂಗೆಟ್ಟ ಪ್ರೇಕ್ಷಕರು, ಸಾಯಿಕುಮಾರ್‌ರಿಂದ ದೂರ ಉಳಿದರು. ನಟರಾಗಿ, ಖಳನಟನಾಗಿ, ಡಬ್ಬಿಂಗ್‌ ಕಲಾವಿದನಾಗಿ ಸಾಯಿಕುಮಾರ್‌ ಬಣ್ಣದ ಪ್ರಪಂಚದಲ್ಲಿಯೇ ಸೈಕಲ್‌ ತುಳಿಯುತ್ತಿದ್ದಾರೆ. ಕೈವಾರದ ತಾತಯ್ಯ ಅವರಿಗೆ ಒಳ್ಳೆಯದು ಮಾಡಲಿ!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada