»   » ತೆಲುಗಿನ ‘ಒಕ್ಕಡು’ ಗೆದ್ದ, ಕನ್ನಡದ ‘ಅಜಯ್‌’ಗೆಲ್ತಾನಾ?

ತೆಲುಗಿನ ‘ಒಕ್ಕಡು’ ಗೆದ್ದ, ಕನ್ನಡದ ‘ಅಜಯ್‌’ಗೆಲ್ತಾನಾ?

Subscribe to Filmibeat Kannada

ಪುನೀತ್‌ ರಾಜ್‌ಕುಮಾರ್‌ ಅವರಿಗೆ ‘ಅ’ಕಾರ ಅಭಯ ನೀಡಿದಂತಿದೆ. ಅಪ್ಪು, ಅಭಿ, ಆಕಾಶ್‌ ನಂತರ ಅವರ ಅಭಿನಯದ ಮತ್ತೊಂದು ‘ಅ’ಕಾರದ ಚಿತ್ರ ‘ಅಜಯ್‌’ ಚಿತ್ರೀಕರಣ ಮುಕ್ತಾಯಗೊಂಡಿದೆ. ಹಾಡುಗಳ ಧ್ವನಿ ಸುರುಳಿಯನ್ನು ಹುಬ್ಬಳ್ಳಿಯಲ್ಲಿ ವೈಭವದಿಂದ ಬಿಡುಗಡೆ ಮಾಡುವ ಉದ್ದೇಶ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮುಂದಿದೆ.

ಅಂದ ಹಾಗೆ ಇದು ಪುನೀತ್‌ರ ಇನ್ನೊಂದು ರಿಮೇಕ್‌ ಚಿತ್ರ. ತೆಲುಗಿನ ‘ಒಕ್ಕಡು’ (ತಮಿಳಿನಲ್ಲಿ ‘ಗಿಲ್ಲಿ’) ‘ಅಜಯ್‌’ ಆಗಿದೆ. ತೆಲುಗು-ತಮಿಳು ನಿರ್ಮಾಪಕರು ಈ ಚಿತ್ರದಿಂದ ತಮ್ಮ ಜೇಬು ತುಂಬಿಸಿಕೊಂಡಿದ್ದರು. ಅದೇ ಬಯಕೆಯನ್ನು ಈಕ ರಾಕ್‌ಲೈನ್‌ ಹೊಂದಿದ್ದಾರೆ.

‘ಅಜಯ್‌’ನ ಹಣೆ ಬರಹ ತಿಳಿಯುವ ಮೊದಲೇ ತಮ್ಮ ಮುಂದಿನ ಚಿತ್ರದ ಬಗ್ಗೆ ರಾಕ್‌ಲೈನ್‌ ತಲೆಕೆಡಿಸಿಕೊಂಡಿದ್ದಾರೆ. ತಮಿಳಿನಲ್ಲಿ ತಮ್ಮ ಹೊಸ ಚಿತ್ರ ನಿರ್ಮಾಣ ಮಾಡಲಿದ್ದು, ಚರಣ್‌ರ ಕಾಲ್‌ಶೀಟ್‌ ಪಡೆದಿದ್ದಾರೆ.

ಇಟಲಿ ಮತ್ತು ಆಸ್ಟ್ರೇಲಿಯಾದಲ್ಲಿ ಈ ಚಿತ್ರದ ಎರಡು ಹಾಡುಗಳ ಚಿತ್ರೀಕರಿಸಲಾಗಿದೆ. ‘ವೀರಕನ್ನಡಿಗ’ ನಿರ್ದೇಶಕ ಮೆಹರ್‌ ರಮೇಶ್‌ ‘ಅಜಯ್‌’ನ ನಿರ್ದೇಶಕರು. ಅವರ ನಿರ್ದೇಶನದ ಮೋಡಿಗೆ ಪುನೀತ್‌ ಮಾರುಹೋಗಿದ್ದಾರೆ.

ಹುಬ್ಬಳ್ಳಿ, ಧಾರವಾಡ, ತುಮಕೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಪ್ರಕಾಶ್‌ ರೈ ಮತ್ತು ಮತ್ತು ನಜರ್‌ ಎದುರು ಪ್ರಥಮ ಬಾರಿಗೆ ಪುನೀತ್‌ ಅಭಿನಯಿಸಿದ್ದಾರೆ. ನಜರ್‌ ಮತ್ತು ಸುಮಿತ್ರಾ ಪುನೀತ್‌ ಪೋಷಕರ ಪಾತ್ರ ನಿರ್ವಹಿಸಿದ್ದು, ಅನುರಾಧ ಮೆಹ್ತಾ ನಾಯಕಿ ಪಾತ್ರದಲ್ಲಿ ಮಿಂಚಿದ್ದಾರೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada