ಇಳಯರಾಜ ಭಕ್ತಿ ಭಾವ : ಮುಕಾಂಬಿಕೆಗೆ ವಜ್ರದ ಕಿರೀಟ
ದೇವಿಯಿಲ್ಲದೆ ನಾನಿಲ್ಲ... ಸಂಗೀತವೂ ಇಲ್ಲ... ಎಲ್ಲವೂ ಆಕೆಯ ಕೃಪೆ -ಇಳಯರಾಜ
ದೇವಸ್ಥಾನದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೇವಿಯಿಂದ ಯಾವುದೇ ವರ ಪಡೆಯುವ ಪ್ರತಿಫಲಾಪೇಕ್ಷೆಯಿಂದ ಕಿರೀಟ ಸಮರ್ಪಿಸುತ್ತಿಲ್ಲ. ದೇವಿಯ ಪ್ರೇರಣೆಯಂತೆ ಅರ್ಪಿಸುತ್ತಿದ್ದೇನೆ ಎಂದರು.
ಮೂಕಾಂಬಿಕೆಯ ದಯೆಯಿಂದಲೇ ನಾನಿಂದು ಸಂಗೀತಗಾರನಾಗಿದ್ದೇನೆ. ಇದು ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಪ್ರಯತ್ನ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಇಳಯರಾಜರ ಪತ್ನಿ ಜೀವಾ, ಪುತ್ರಿ ಭವತಾರಿಣಿ, ಕೊಲ್ಲೂರು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಎಂ.ಎಚ್.ಕಾಳೆ, ಶಾಸಕ ಗೋಪಾಲ ಪೂಜಾರಿ ಮತ್ತಿತರರು ಹಾಜರಿದ್ದರು.
ದೇವಿ ಮತ್ತು ಇಳಯರಾಜ ನಂಟು : ಇತ್ತೀಚೆಗಷ್ಟೇ ತಮ್ಮ ಪುತ್ರಿ ಭವತಾರಿಣಿಯ ವಿವಾಹವನ್ನು ಕೊಲ್ಲೂರು ಶ್ರೀಕ್ಷೇತ್ರದಲ್ಲಿಯೇ ನೆರವೇರಿಸಿರುವ ಇಳಯರಾಜ, ದೇವಿಯ ಪರಮ ಭಕ್ತರು. ಈ ಹಿಂದೆ ದೇವಿಗೆ 30ಲಕ್ಷರೂ. ಮೌಲ್ಯದ ವಜ್ರದ ಹಸ್ತಗಳನ್ನು ಅರ್ಪಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
Post your views
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications