»   » ‘ಸಾವಿತ್ರಿ’ಗಾಗಿ ಮುಂಬೈನಿಂದ ಓಡೋಡಿ ಬಂದ ಡೈಸಿ!

‘ಸಾವಿತ್ರಿ’ಗಾಗಿ ಮುಂಬೈನಿಂದ ಓಡೋಡಿ ಬಂದ ಡೈಸಿ!

Posted By:
Subscribe to Filmibeat Kannada


ದಟ್ಸ್‌ ಕನ್ನಡದ ‘ರಮೇಶ್‌ ಅರವಿಂದ್‌ ನಿರ್ದೇಶನದ ‘ಸತ್ಯವಾನ್‌ ಸಾವಿತ್ರಿ’ ಚಿತ್ರದಲ್ಲಿ ಅವಕಾಶ ಪಡೆದಿರುವ ಡೈಸಿ, ನಂತರ ರವಿಚಂದ್ರನ್‌ ಚಿತ್ರದಲ್ಲಿ ನಟಿಸುತ್ತಾರಂತೆ. ಈ ಬಗ್ಗೆ ಮಾತುಕತೆ ಅಂತಿಮ ಹಂತಕ್ಕೆ ಬಂದಿದೆ ಎಂದು ಡೈಸಿಯೇ ಖುದ್ದಾಗಿ ಹೇಳಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಇನ್ನೇನು ಸ್ಥಾನಭದ್ರವಾಯಿತು ಅನ್ನುವಾಗಲೇ ಮುಂಬೈಗೆ ಹಾರಿ, ಜಾನ್‌ ಅಬ್ರಹಾಂ ಮತ್ತು ಅಕ್ಷಯ್‌ ಕುಮಾರ್‌ ಜೊತೆ ‘ಗರಂ ಮಸಾಲ’ದಲ್ಲಿ ಅಭಿನಯಿಸಿ, ರಸಿಕ ಅಭಿಮಾನಿಗಳನ್ನು ಡೈಸಿ ಸಂಪಾದಿಸಿದ್ದರು! ನಂತರ ಬಾಲಿವುಡ್‌ನಲ್ಲಿ ಅವಕಾಶಗಳು ಗಿಟ್ಟಲಿಲ್ಲ. ಕನ್ನಡಕ್ಕೆ ಬರಲು ಮನಸ್ಸು ಒಪ್ಪಲಿಲ್ಲ. ಆದರೆ ವಿಧಿಯಿಲ್ಲ!

‘ಭಗವಾನ್‌’, ‘ಐಶ್ವರ್ಯ’ ಚಿತ್ರದಲ್ಲಿನ ತಮ್ಮ ಪಾತ್ರಗಳ ಬಗ್ಗೆ ಡೈಸಿಗೆ ಪಶ್ಚತ್ತಾಪವಾಗಿದೆ. ‘ಇನ್ನೆಂದೂ ಅಂತಹ ಪಾತ್ರಗಳನ್ನು ಮಾಡೋದಿಲ್ಲ... ಮಾಡೋದಿಲ್ಲ... ಮಾಡೋದಿಲ್ಲ...’’ ಎಂದು ಗಟ್ಟಿಯಾಗಿ ಮೂರು ಸಲ ಹೇಳಿದ್ದಾರೆ.

ಪಾತ್ರಗಳ ಆಯ್ಕೆಯಲ್ಲಿ ನಿಗಾವಹಿಸುವುದಾಗಿ ಹೇಳಿರುವ ಡೈಸಿ ಮುಂದೆ, ಈಗ ಇನ್ನೊಂದು ಹಿಂದಿ ಸಿನಿಮಾದ ಆಫರ್‌ ಇದೆಯಂತೆ. ಡೈಸಿ, ಕೇವಲ ಬಳುಕುವ ಹುಡುಗಿಯಾಗಿ ಮಾತ್ರವಲ್ಲ, ‘ರಾಮ ಶಾಮ ಭಾಮ’, ‘ತವರಿನ ಸಿರಿ’, ‘ಬಿಸಿಬಿಸಿ’ ಚಿತ್ರಗಳ ಮೂಲಕ ಅಭಿನೇತ್ರಿ ಎನ್ನುವುದನ್ನೂ ಸಾಬೀತುಮಾಡಿದವರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada