»   » ‘ದಾದಾಗಿರಿಯ ದಿನಗಳು’ ಮತ್ತು ಗಿರೀಶ್‌ ಕಾರ್ನಾಡ್‌!

‘ದಾದಾಗಿರಿಯ ದಿನಗಳು’ ಮತ್ತು ಗಿರೀಶ್‌ ಕಾರ್ನಾಡ್‌!

Posted By:
Subscribe to Filmibeat Kannada


‘ಅಗ್ನಿ’ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಚಿತ್ರರಂಗದೊಡನೆ ನಿಕಟ ಸಂಪರ್ಕ ಹೊಂದಿರುವ ಅಗ್ನಿ ಶ್ರೀಧರ್‌ ಅವರ ‘ದಾದಾಗಿರಿಯ ದಿನಗಳು’ ಕೃತಿ ಆಧರಿಸಿ, ನಿನಿಮಾ ತಯಾರಾಗಲಿದೆ.

ತಮ್ಮ ಶಿಷ್ಯ ಚೈತನ್ಯ ನಿರ್ದೇಶಿಸಲಿರುವ ‘ದಾದಾಗಿರಿಯ ದಿನಗಳು’ ಚಿತ್ರದಲ್ಲಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಗಿರೀಶ್‌ ಕಾರ್ನಾಡ್‌ ಅಭಿನಯಿಸಲಿದ್ದಾರೆ.

ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ಧಪ್ಪ ಅವರ ಪುತ್ರ ಚೈತನ್ಯ, ಇತ್ತೀಚೆಗಷ್ಟೇ ಈಟೀವಿ ಕನ್ನಡ ಚಾನಲ್‌ಗಾಗಿ ‘ಕಿಚ್ಚು’ ಎಂಬ ಧಾರಾವಾಹಿ ನಿರ್ಮಿಸಿದ್ದರು. ಚೈತನ್ಯ ಈ ಚಿತ್ರದ ಮೂಲಕ ಹಿರಿತೆರೆ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಲಿರುವುದೂ ವಿಶೇಷ.

‘ಅಗ್ನಿ’ ಪತ್ರಿಕೆಯ ಮಾಜಿ ಸಂಪಾದಕ ಹಾಗೂ ಚಿತ್ರರಂಗದೊಡನೆ ನಿಕಟ ಸಂಪರ್ಕ ಹೊಂದಿರುವ ಅಗ್ನಿ ಶ್ರೀಧರ್‌ ಅವರ ‘ದಾದಾಗಿರಿಯ ದಿನಗಳು’ ಕೃತಿ ಆಧರಿಸಿ, ನಿನಿಮಾ ತಯಾರಾಗಲಿದೆ. ಕಾರ್ನಾಡ್‌ ಅವರೊಂದಿಗೆ ವಿನಯಾಪ್ರಸಾದ್‌, ಕ್ಷಮಿಸಿ ವಿನಯಾಪ್ರಕಾಶ್‌ ಅಭಿನಯಿಸಲಿದ್ದಾರೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕಲಾನಿರ್ದೇಶಕ ಶಶಿಧರ್‌ ಅಡಪ ಈ ಯೋಜನೆಯಲ್ಲಿ ನಿರತರಾಗಿದ್ದಾರೆ. ‘ಭೂಮಿಗೀತ’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅತುಲ್‌ ಕುಲಕರ್ಣಿ, ಈ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada