»   » ಇದೇನಮ್ಮ ರಮ್ಯ, ಯಾಕಮ್ಮ ಹೀಗೆ?

ಇದೇನಮ್ಮ ರಮ್ಯ, ಯಾಕಮ್ಮ ಹೀಗೆ?

Posted By:
Subscribe to Filmibeat Kannada
  • ಎ. ರಂಗಸ್ವಾಮಿ
    rangabeans@rediffmail.com
ಕನ್ನಡದಲ್ಲಿ ನಾಯಕಿಯರಿಲ್ಲ ಎನ್ನುವ ದೂರಿಗೆ ಸಾವೇ ಇಲ್ಲ ಅನ್ನಿಸುತ್ತದೆ. ಪ್ರತಿಭಾವಂತ ಕನ್ನಡ ಹುಡುಗಿಯರು ಆಗಾಗ ಕಾಣಿಸಿಕೊಂಡರೂ, ಚಿತ್ರರಂಗದಲ್ಲಿ ಅವರ ಆಯುಷ್ಯ ಮಾತ್ರ ಅತ್ಯಲ್ಪ . ಕೆಲವರು ನೆರೆಯ ಚಿತ್ರರಂಗಕ್ಕೆ ವಲಸೆ ಹೋಗಿ ಕನ್ನಡ ಮರೆಯುವುದೂ ಇದೆ. ಅಂಥವರ ಸಂಖ್ಯೆ ಹೆಚ್ಚೇನಿಲ್ಲ ಬಿಡಿ.

ಪ್ರಸ್ತುತ ನನ್ನೀ ಬರಹ, ಕನ್ನಡದ ಹುಡುಗಿಯರ ಬಗೆಗೆ ಕನ್ನಡ ಚಿತ್ರರಂಗದ ನಿರ್ಮಾಪಕ /ನಿರ್ದೇಶಕರ ನಿಲುವಿನ ಕುರಿತದ್ದು . ಕನ್ನಡದ ಹುಡುಗಿಯರು ಸಂಖ್ಯೆಯಲ್ಲಿ ಮೊದಲೇ ಕಡಿಮೆ ; ಇಂಥ ಪರಿಸ್ಥಿತಿಯಲ್ಲಿ ಇರುವ ಹುಡುಗಿಯರನ್ನು ಔಚಿತ್ಯಪೂರ್ಣವಾಗಿ ಬಳಸಿಕೊಳ್ಳುವಲ್ಲಿ ನಮ್ಮ ನಿರ್ದೇಶಕ-ನಿರ್ಮಾಪಕರು ಸೋಲುತ್ತಿದ್ದಾರೆ. ಈ ಸೋಲಿನಲ್ಲಿ ನಾಯಕಿಯರ ಸ್ವಯಂಕೃತ ಅಪರಾಧವೂ ಇದೆಯೆನ್ನಿ .

ತಾಜಾ ಚೆಲುವೆ ರಮ್ಯಳ ಉದಾಹರಣೆಯನ್ನೇ ನೋಡಿ. ‘ಅಭಿ’ ಚಿತ್ರದಲ್ಲಿ ರಮ್ಯ ಚೆನ್ನಾಗಿ ಅಭಿನಯಿಸಿದ್ದಳು. ಆನಂತರದ ‘ಎಕ್ಸ್‌ ಕ್ಯೂಸ್‌ ಮಿ’ ಚಿತ್ರದಲ್ಲಿ ಕೂಡ ರಮ್ಯ ಮೋಹಕವಾಗಿ ನಟಿಸಿದ್ದರು. ಎರಡೂ ಚಿತ್ರಗಳು ಶತದಿನ ಪ್ರದರ್ಶನ ಕಂಡಿದ್ದವು. ಇಂಥ ನಟಿಗೆ ಇದ್ದಕ್ಕಿದ್ದಂತೆ ಅದೇನಾಯಿತು?

ಒಂದೆರಡು ಚಿತ್ರಗಳು ಯಶಸ್ವಿಯಾದದ್ದೆ ಹಿರಿಯಕ್ಕಂದಿರ ಚಾಳಿಯಂತೆ ರಮ್ಯ ಪರಭಾಷಾ ಚಿತ್ರಗಳತ್ತ ಗಮನ ಹರಿಸಿದ್ದಾಳೆ. ಅದೇನೂ ಅಂಥ ತಪ್ಪಲ್ಲ . ಆದರೆ, ಕನ್ನಡದಲ್ಲಿ ಗೌರಮ್ಮನಂತೆ ವರ್ತಿಸುವ ಈಕೆ ಪರಭಾಷೆ ಚಿತ್ರದಲ್ಲಿ ಬಿಚ್ಚೋಲೆ ಗೌರಮ್ಮನಾಗಿರುವುದು ಯಾಕೆ ?

‘ಎಕ್ಸ್‌ ಕ್ಯೂಸ್‌ ಮಿ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕ ಪ್ರೇಮ್‌ ಮತ್ತು ರಮ್ಯ ನಡುವೆ ನಡೆದ ಅಂಗಾಂಗ ಪ್ರದರ್ಶನದ ಬಗೆಗೆ ತುಸು ಚರ್ಚೆಯಾಗಿತ್ತು . ಅಂಗಾಂಗ ಪ್ರದರ್ಶನದ ಬಗ್ಗೆ ನಾಯಕಿ ರಮ್ಯ ತೋರಿದ ನಿಲುವು ಎಲ್ಲರಿಗೂ ಮೆಚ್ಚಿಗೆಯಾಗಿತ್ತು . ಆದರೆ ಈ ರಮ್ಯ ಮಾಡಿರುವುದೇನು ಗೊತ್ತಾ ? ಇತ್ತೀಚೆಗೆ ಬಿಡುಗಡೆಯಾದ ‘ಕುತ್ತು’ ಎಂಬ ತಮಿಳು ಚಿತ್ರದಲ್ಲಿ ರಮ್ಯ ವಸ್ತ್ರವಿರೋಧಿಯಾಗಿದ್ದಾರೆ. ಇದು ರಮ್ಯರ ದ್ವಂದ್ವ ನಿಲುವನ್ನು ತೋರಿಸುತ್ತದೆ.

ರಮ್ಯ ಜೊತೆ ಅಭಿನಯಿಸಿರುವ ತಮಿಳು ಚಿತ್ರದ ಇದೇ ನಾಯಕನೊಂದಿಗೆ ‘ಅಪ್ಪು’ ಚಿತ್ರದ ನಾಯಕಿ ರಕ್ಷಿತ ಈ ಮುನ್ನ ನಟಿಸಿದ್ದರು. ಆ ಚಿತ್ರದಲ್ಲಿ ರಕ್ಷಿತಾ ಕೂಡಾ ಚೆಲ್ಲುಚೆಲ್ಲಾಗಿ ಚೆಲ್ಲಿಕೊಂಡಿದ್ದರು. ರಕ್ಷಿತಾಳನ್ನು ಅಶ್ಲೀಲವಾಗಿ ಚಿತ್ರಿಸಲಾಗಿತ್ತು . ಇದೇನು ನಾಯಕನ ಮಹಿಮೆಯಾ !

ಮತ್ತೊಂದು ಸೋಜಿಗದ ಸಂಗತಿಯೆಂದರೆ ಈ ಎರಡು ಚಿತ್ರಗಳ ಹಾಡಿನ ಸನ್ನಿವೇಶಗಳು ಹೋಲಿಕೆಯಾಗುತ್ತವೆ. ಜಡ ವಸ್ತುಗಳಂತೆ ರಕ್ಷಿತಾ-ರಮ್ಯಾರನ್ನು ಎಳೆದಾಡುವುದು, ಅವರ ಅಂಗಾಂಗಳನ್ನು ಪದೇಪದೇ ಮುಟ್ಟುವುದು, ಮತ್ತಿತರ ಚೇಷ್ಟೆಗಳನ್ನು ನಾಯಕ ಮಾಡುತ್ತಾನೆ. ನಾಯಕಿಯರು ಕನ್ನಡದವರೆಂದೇ ನಾಯಕ ಈ ರೀತಿ ಮಾಡಿದ್ದಾನೇನೊ ಅನ್ನಿಸುತ್ತದೆ.

ಮತ್ತೊಂದು ವಿಷಯವೆಂದರೆ, ಈ ಎರಡು ತಮಿಳು ಚಿತ್ರಗಳನ್ನು ಇಲ್ಲಿ ಸಭ್ಯ ನಿರ್ಮಾಪಕರೆಂದು ಕರೆಸಿಕೊಳ್ಳುವ ಕನ್ನಡದ ನಿರ್ಮಾಪಕರುಗಳೇ ನಿರ್ಮಿಸಿದ್ದಾರೆ. ಕನ್ನಡದ ನಿರ್ಮಾಪಕರು, ಕನ್ನಡದ ಹಣ, ಕನ್ನಡದ ಹುಡುಗಿಯರು, ತಮಿಳುನಾಡಲ್ಲಿ ಡಿಗಾ ಡಿಗಾ.

ಎಲ್ಲಿಗೆ ಬಂತು ನೋಡಿ ಸಂಸ್ಕೃತಿ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X