»   » ಕಾಲಿವುಡ್‌ ಸೆಕ್ಸ್‌ ಸಿಂಬಲ್‌ ನಮಿತಾಗೆ ಸ್ವಾಗತ...

ಕಾಲಿವುಡ್‌ ಸೆಕ್ಸ್‌ ಸಿಂಬಲ್‌ ನಮಿತಾಗೆ ಸ್ವಾಗತ...

Subscribe to Filmibeat Kannada

ನಮಿತಾ ಕನ್ನಡಕ್ಕೆ ಬರಲಿದ್ದಾಳೆ!!! ‘ಅಂದ ಹಾಗೆ ಯಾರಪ್ಪಾ ಇವಳು ನಮಿತಾ’ ಎಂದು ನೀವು ಗೊಣಗಿದರೆ, ಕಾಲಿವುಡ್‌ ಬಗ್ಗೆ ನಿಮಗೆ ಗೊತ್ತಿಲ್ಲ ಎಂದರ್ಥ!

ಮುಂಬೈನ ಈ ಮಾಜಿ ರೂಪದರ್ಶಿ, ಗುಜ್ಜು(ಗುಜರಾತ್‌ ಮೂಲ) ಹುಡುಗಿ ತಮಿಳಿನ ಹೊಚ್ಚಹೊಸ ಸೆಕ್ಸ್‌ ಸಿಂಬಲ್‌! ಕಾಲಿವುಡ್‌ನಲ್ಲಿ ಈಗ ಈಯಮ್ಮನದೇ ಮಾತು. ನಮಿತಾ ಚಿತ್ರಗಳು ಪ್ರದರ್ಶನಗೊಳ್ಳುವ ಥಿಯೇಟರ್‌ಗಳಲ್ಲಿ ಪಡ್ಡೆಗಳದ್ದೇ ದಂಡು.

ಈವರೆಗೆ ತಮಿಳಿನಲ್ಲಿ ನಟಿಸಿದ್ದು ಅರ್ಧ ಡಜನ್‌ ಚಿತ್ರಗಳಲ್ಲಿಯಾದರೂ, ಜನಪ್ರಿಯತೆಯಲ್ಲಿ ಮಾತ್ರ ತುಟ್ಟ ತುದಿಯನ್ನು ತಲುಪಿರುವ ನಮಿತಾ ಕನ್ನಡಕ್ಕೆ ಬರುತ್ತಿದ್ದಾಳೆ. ರಸಿಕಪ್ರಿಯ ರವಿಚಂದ್ರನ್‌ ಜೋಡಿಯಾಗಿ ನಟಿಸಲಿದ್ದಾಳೆ.

‘ನಮ್ಮಣ್ಣ’ ಚಿತ್ರದ ಮೂಲಕ ಕಂಗೆಟ್ಟ ಬಾಲಮುತ್ತಯ್ಯ ನಿರ್ಮಾಣದ ಹೊಸ ಚಿತ್ರ ‘ನೀಲಕಂಠ’. ಇದರಲ್ಲಿ ನಮಿತಾಗೆ ಒಳ್ಳೆ ಪಾತ್ರವಿದೆಯಂತೆ. ಹೊಸ ಕನ್ನಡ ಸಿನಿಮಾದ ಚಿತ್ರಕತೆ ಮತ್ತು ಪಾತ್ರ ನನಗೆ ಸಖತ್ತು ಇಷ್ಟವಾಗಿದೆ ಎನ್ನುವ ನಮಿತಾ, ತಮಿಳಿನಂತೆಯೇ ಕನ್ನಡದಲ್ಲೂ ಯಶಸ್ಸನ್ನು ಪಡೆಯುವ ಉತ್ಸಾಹದಲ್ಲಿದ್ದಾಳೆ. ನಮಿತಾಗೆ ಸ್ವಾಗತ.

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada