»   » ಪ್ರಕಾಶ್‌ ನಿರ್ದೇಶನದಲ್ಲಿ ಪುನೀತ್‌-ಪಾರ್ವತಿ ‘ಮಿಲನ’

ಪ್ರಕಾಶ್‌ ನಿರ್ದೇಶನದಲ್ಲಿ ಪುನೀತ್‌-ಪಾರ್ವತಿ ‘ಮಿಲನ’

Subscribe to Filmibeat Kannada


ಮಿಲನದಲ್ಲಿ ಪುನೀತ್‌ ರಾಜ್‌ಕುಮಾರ್‌ ರೇಡಿಯೋ ಜಾಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ದುಷ್ಯಂತ್‌ ನಿರ್ಮಾಣದ ಈ ಚಿತ್ರದಲ್ಲಿ, ನಾಯಕಿಯಾಗಿ ಮಲಯಾಳಿ ಬೆಡಗಿ ಪಾರ್ವತಿ ಅಭಿನಯಿಸುತ್ತಿದ್ದಾರೆ.

‘ಖುಷಿ’ ಮತ್ತು ‘ರಿಷಿ’ ಚಿತ್ರಗಳ ಮೂಲಕ ಗಾಂಧೀನಗರದ ಗಮನಸೆಳೆದ ನಿರ್ದೇಶಕ ಪ್ರಕಾಶ್‌, ಇದೀಗ ಪುನೀತ್‌ರಾಜ್‌ಕುಮಾರ್‌ ಅಭಿನಯದ ‘ಮಿಲನ’ ಚಿತ್ರ ನಿರ್ದೇಶಿಸುತ್ತಿದ್ದಾರೆ.

ಚಿತ್ರದ ಮುಹೂರ್ತ ನಗರದ ದೊಡ್ಡಗಣಪತಿ ದೇವಸ್ಥಾನದಲ್ಲಿ ಗುರುವಾರ(ಏಪ್ರಿಲ್‌ 5) ನೆರವೇರಿತು. ಚಿತ್ರರಂಗದ ಗಣ್ಯರು ಹಾಗೂ ಹಿತೈಷಿಗಳು ಮುಹೂರ್ತಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು. ‘ಮೊನಾಲಿಸಾ’ ಹಾಗೂ ‘ಶ್ರೀ’ ಚಿತ್ರಗಳ ನಿರ್ಮಾಪಕ ದುಷ್ಯಂತ್‌ ನಿರ್ಮಾಣದ ಈ ಚಿತ್ರದಲ್ಲಿ, ನಾಯಕಿಯಾಗಿ ಮಲಯಾಳಿ ಬೆಡಗಿ ಪಾರ್ವತಿ ಅಭಿನಯಿಸುತ್ತಿದ್ದಾರೆ.

ಮಿಲನದಲ್ಲಿ ಪುನೀತ್‌ ರೇಡಿಯೋ ಜಾಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ನಾಯಕಿ ಪಾರ್ವತಿ ಈಗಾಗಲೇ ‘ನೋಟ್‌ಬುಕ್‌’ ಹಾಗೂ ‘ಔಟ್‌ ಆಫ್‌ ಸಿಲೆಬಸ್‌’ ಎಂಬ ಎರಡು ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದು, ಅವು ಈಗಾಗಲೇ ತೆರೆಕಂಡಿವೆ.

ಮುಂಗಾರುಮಳೆ ಖ್ಯಾತಿಯ ಮನೋಮೂರ್ತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ನಿರ್ದೇಶಕ ಪ್ರಕಾಶ್‌ರ ನೆಚ್ಚಿನ ಛಾಯಾಗ್ರಾಹಕ ಕೃಷ್ಣಕುಮಾರ್‌ ಛಾಯಾಗ್ರಹಣದ ಹೊಣೆಹೊತ್ತಿದ್ದಾರೆ.

ಚಿತ್ರದ ಕಥೆಯ ಕುರಿತು ನಿರ್ದೇಶಕ ಪ್ರಕಾಶ್‌ ಆಗಲಿ, ನಾಯಕ ಪುನೀತ್‌ ಆಗಲಿ ಹೆಚ್ಚಿಗೆ ಮಾತನಾಡಲಿಲ್ಲ. ಆದರೆ, ಜೀವನವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಏನೇ ಆದರೂ ಕುಗ್ಗದೆ, ಎಲ್ಲವನ್ನೂ ಸದವಕಾಶವೆಂದು ತಿಳಿದು ಮುನ್ನಡೆಯಬೇಕು ಎಂಬ ಸಂದೇಶ ಚಿತ್ರದಲ್ಲಿದೆ ಎಂದು ಹೇಳಿದರು.

ಮೊದಲ ಹಂತದ ಚಿತ್ರೀಕರಣ ಸತತ 35ದಿನಗಳಕಾಲ ನಡೆಯಲಿದೆ. ಮೊದಲ ಹಂತದ ಚಿತ್ರೀಕರಣ ಮುಗಿದು 8-10ದಿನಗಳಾದ ಮೇಲೆ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಪ್ರಕಾಶ್‌ ತಿಳಿಸಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada