»   » ಕರ್ನಾಟಕದ ಟಾಪ್‌ ಸ್ಟಾರ್‌ ಚಿನ್ಮಯ್‌ಗೆ ಸ್ಯಾಂಟ್ರೋ ಕಾರು

ಕರ್ನಾಟಕದ ಟಾಪ್‌ ಸ್ಟಾರ್‌ ಚಿನ್ಮಯ್‌ಗೆ ಸ್ಯಾಂಟ್ರೋ ಕಾರು

Subscribe to Filmibeat Kannada


ಬೆಂಗಳೂರು : ಸಂಗೀತ ಪ್ರೇಮಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಜೀಕನ್ನಡದ ‘ಸರಿಗಮಪ’ ಸಂಗೀತ ಸ್ಪರ್ಧೆಯ ಕಿರೀಟ, ಚಿನ್ಮಯ್‌ ಪಾಲಾಗಿದೆ. ಬಹುಮಾನ ರೂಪದಲ್ಲಿ ಹ್ಯುಂಡೈ ಸ್ಯಾಂಟ್ರೋ ಕಾರು ಚಿನ್ಮಯ್‌ಗೆ ದಕ್ಕಿದೆ.

ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಚಿನ್ಮಯ್‌ ಮತ್ತು ಚಿತ್ರದುರ್ಗದ ಸೌಮ್ಯಶ್ರೀ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿತ್ತು. ವೀಕ್ಷಕರ ಮೂರು ಲಕ್ಷ ಎಸ್ಸೆಮ್ಮೆಸ್‌ಗಳು ಸ್ಪರ್ಧೆಯ ಸೋಲುಗೆಲುವುಗಳನ್ನು ನಿರ್ಧರಿಸಿವೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ, ಫಲಿತಾಂಶಗಳನ್ನು ಘೋಷಿಸಲಾಯಿತು. ಹಿರಿಯ ಗಾಯಕಿ ಎಸ್‌.ಜಾನಕಿ, ಚಿತ್ರ ಸಾಹಿತಿ ಆರ್‌.ಎನ್‌.ಜಯಗೋಪಾಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಐದು ಸಾವಿರ ಸ್ಪರ್ಧಿಗಳಲ್ಲಿ ಚಿನ್ಮಯ್‌ ಕರ್ನಾಟಕದ ಟಾಪ್‌ ಸಿಂಗಿಂಗ್‌ ಸ್ಟಾರ್‌ ಆಗಿ ಪ್ರಥಮ ಬಹುಮಾನವನ್ನು, ಸೌಮ್ಯಶ್ರೀ ಎರಡನೇ ಬಹುಮಾನವನ್ನು ಪಡೆದಿದ್ದಾರೆ. ರತ್ನಮಾಲಾ ಪ್ರಕಾಶ್‌, ರಾಜು ಅನಂತಸ್ವಾಮಿ, ರಾಜೇಶ್‌ ಕೃಷ್ಣ, ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್‌, ಎಸ್‌.ಅಶ್ವಥ್‌ ಮತ್ತಿತರರು ‘ಸರಿಗಮಪ’ದಲ್ಲಿ ಮಾರ್ಗದರ್ಶಕರಾಗಿ ಪಾಲ್ಗೊಂಡಿದ್ದರು. ಎಂ.ಡಿ.ಪಲ್ಲವಿ ನಿರೂಪಣೆಯಲ್ಲಿ ಕಾರ್ಯಕ್ರಮ ಈವರೆಗೆ ಮೂಡಿ ಬಂದಿತ್ತು.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada