»   » ಹೊಸಬರು ಬಂದರು ದಾರಿ ಬಿಡಿ!

ಹೊಸಬರು ಬಂದರು ದಾರಿ ಬಿಡಿ!

Subscribe to Filmibeat Kannada

ಗಾಂಧಿನಗರಕ್ಕೆ ಹೊಸ ಮುಖಗಳು ಎಂಟ್ರಿಯಾಗುತ್ತಿವೆ. ಈ ಮಾತಿಗೆ ಹೊಸ ಉದಾಹರಣೆ ದಿಲೀಪ್‌ ಪೈ.

ಕಾರವಾರದ ಈ ಹುಡುಗನನ್ನು ಹೀರೋ ಮಾಡಲು ಅವರ ಕುಟುಂಬ ಕಂಕಣತೊಟ್ಟಿದೆ. ದಿಲೀಪ್‌ರ ಅಣ್ಣ ನಂದಕುಮಾರ್‌, ಅತ್ತಿಗೆ ಸೋನಾಲಿ, ಅಕ್ಕ ಗೀತಾ, ಗಾಡ್‌ ಫಾದರ್‌ಗಳಂತೆ ನಿಂತಿದ್ದಾರೆ. ಚಿತ್ರದ ಹೆಸರು ‘ರೋಡ್‌ ರೋಮಿಯೋ’. ರೋಮಿಯೋಗೆ ಜೂಲಿಯೆಟ್‌ ಆಗಿ ಆಶಿತಾ ನಟಿಸುತ್ತಿದ್ದಾಳೆ. ರೀಲ್‌ ಸುತ್ತುವ ನಿರ್ದೇಶಕ ಸಾಯಿಪ್ರಕಾಶ್‌, ಚಿತ್ರದ ನಿರ್ದೇಶನದ ಹೊಣೆ ಹೊತ್ತು, ಚಿತ್ರವನ್ನು ಗೆಲ್ಲಿಸುವ ವಿಶ್ವಾಸ ತುಂಬಿದ್ದಾರೆ.

ಮುಂಬಯಿನಲ್ಲಿ ಅಭಿನಯ ಕಲಿತು ಬಂದಿರುವ ದಿಲೀಪ್‌ ಪೈ ಅವರನ್ನು ಸ್ಯಾಂಡಲ್‌ವುಡ್‌ನ ನಾಯಕನನ್ನಾಗಿ ಮಾಡಲು, ಸಾಯಿಪ್ರಕಾಶ್‌ ಸ್ವಂತದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದೆಲ್ಲಾ ಸರಿ, ಸ್ಟಾರ್‌ಗಳ ಚಿತ್ರಕ್ಕೆ ಸೈ ಎನ್ನುತ್ತಿದ್ದ ಸಾಯಿ, ಹೊಸಬರ ಚಿತ್ರ ನಿರ್ದೇಶಿಸಲು ಮನಸ್ಸು ಮಾಡಿದ್ದಾದರೂ ಹೇಗೆ ಮತ್ತು ಯಾಕೆ ಎನ್ನುವ ಕುಹಕ ಗಾಂಧಿನಗರದಲ್ಲಿದೆ.

ಇನ್ನೊಂದು ಕಡೆ ಮತ್ತೊಂದು ಹೊಸಬರ ಚಿತ್ರ ‘ತುಂಟ-ತುಂಟಿ’ಯನ್ನು ನಾಗೇಂದ್ರ ಪ್ರಸಾದ್‌ ನಿರ್ದೇಶಿಸುತ್ತಿದ್ದಾರೆ. ಭಾಮಾ ಹರೀಶ್‌ ನಿರ್ಮಾಣದ ಶಿಷ್ಯ ಚಿತ್ರದಲ್ಲೂ ಹೊಸಬರೇ ತುಂಬಿದ್ದಾರೆ. ಸ್ಟಾರ್‌ಗಳನ್ನು ಹಾಕಿಕೊಂಡು ಚಿತ್ರಮಾಡಿದರೂ ರಿಸ್ಕ್‌ ಇದ್ದೇ ಇರುತ್ತೆ...ಇದಕ್ಕಿಂತಲೂ ಹೊಸಬರ ಚಿತ್ರ ನಿರ್ಮಾಣವೇ ಸುಲಭ ಎನ್ನುವ ಅಭಿಪ್ರಾಯ ನಿರ್ಮಾಪಕರಲ್ಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada