»   » ಅಣ್ಣಾವ್ರ ಭಾವಚಿತ್ರ ಕಳವು : ಚೋರಾಭಿಮಾನಿ ಕೃತ್ಯ

ಅಣ್ಣಾವ್ರ ಭಾವಚಿತ್ರ ಕಳವು : ಚೋರಾಭಿಮಾನಿ ಕೃತ್ಯ

Posted By:
Subscribe to Filmibeat Kannada

ಬೆಂಗಳೂರು : ರಾಜ್‌ಕುಮಾರ್‌ ಅಭಿಮಾನಿಗಳ ವಿಚಿತ್ರವಿಚಿತ್ರ ಮನಸ್ಥಿತಿಗಳು ವರದಿಯಾಗುತ್ತಲೇ ಇವೆ. ಅವರ ಭಾವಚಿತ್ರವನ್ನು ಅಭಿಮಾನಿಯಾಬ್ಬ ಕಳುವು ಮಾಡಿರುವುದು ಈಗ ವರದಿಯಾಗಿದೆ.

ಕಂಠೀರವ ಸ್ಟುಡಿಯಾದಲ್ಲಿನ ರಾಜ್‌ಕುಮಾರ್‌ ಸಮಾಧಿ ಬಳಿ ಇದ್ದ ಆಳೆತ್ತೆರದ ಭಾವಚಿತ್ರವನ್ನು, ಪೊಲೀಸರು ಮತ್ತು ರಾಜ್‌ ಅಭಿಮಾನಿಗಳ ಸರ್ಪ ಕಾವಲಿನ ಮಧ್ಯೆಯೇ ಅಭಿಮಾನಿಯಾಬ್ಬ ಜಾಣತನದಿಂದ ಕಳುವು ಮಾಡಿದ್ದಾನೆ.

ಅಪರೂಪದ ಚಿತ್ರ : ಡಿ.ಕೆ.ಚೌಟ ಅವರ ಪುತ್ರ ಸಂದೀಪ್‌ ಚೌಟ, ಅಣ್ಣಾವ್ರ ಅಂದದ ನಸುನಗೆಯ ಭಾವಚಿತ್ರವನ್ನು ರಾಜ್‌ ಕುಟುಂಬಕ್ಕೆ ಕಾಣಿಕೆಯಾಗಿ ನೀಡಿದ್ದರು. ವಜ್ರೇಶ್ವರಿ ಕಂಬೈನ್ಸ್‌ನಲ್ಲಿದ್ದ ಆ ಭಾವಚಿತ್ರವನ್ನು, ರಾಜ್‌ ಸಮಾಧಿ ಬಳಿ ಇಡಲಾಗಿತ್ತು.

ರಾಜ್‌ ನಿಧನದ ನಂತರ ಅವರ ಸಮಾಧಿ ಸ್ಥಳ ನಿರಂತರವಾಗಿ ಸುದ್ದಿ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಕೋಳಿಯಾಂದು ರಾಜ್‌ ಸಮಾಧಿ ಬಳಿಯೇ ಪ್ರಾಣ ತ್ಯಜಿಸಿದ ಘಟನೆ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada