»   » ಒಂದೇ ಲಕ್ಷ ಸಂಭಾವನೆಯ ನಾಯಕಿ ಅಂತ ಚಂದುಳ್ಳಿ ಚೆಲುವೆ

ಒಂದೇ ಲಕ್ಷ ಸಂಭಾವನೆಯ ನಾಯಕಿ ಅಂತ ಚಂದುಳ್ಳಿ ಚೆಲುವೆ

Posted By: Super
Subscribe to Filmibeat Kannada

ಚಿತ್ರ : ಪ್ರೀತಿ ನೀನಿಲ್ಲದೆ ನಾ ಹೇಗಿರಲಿ. ನಖರಾ ಮಾಡಿದ ನಾಯಕಿ : ವಾಲಿ ಖ್ಯಾತಿಯ ಪೂನಂ. ಪೂನಮ್ಮಾ ಸಾಕಮ್ಮಾ ಎಂದ ನಿರ್ಮಾಪಕರು : ಬೆನಕ ರಮೇಶ್‌ ಹಾಗೂ ಬಾಬು ಖಾನ್‌.

ನಮ್ಮೂರಿನ ಚಾಲ್ತಿ ನಾಯಕಿಯರಿಗಿಂತ ಪೂನಂ ಸಂಭಾವನೆ ತೀರಾ ಕಮ್ಮಿ; ಒಂದೇ ಲಕ್ಷ. ಲಕ್ಷಣವಾಗಿದ್ದಾಳೆ ಅನ್ನೋದು ಟ್ರಂಪ್‌ ಕಾರ್ಡ್‌. ಅಷ್ಟು ಸಾಕೂಂತ ಮುಂಬಯಿಯಿಂದ ಈಕೆಯನ್ನು ಕರೆಸಿದ ಬೆನಕ ರಮೇಶ್‌ ಈಗ ಬೆನಕ ಬೆನಕ ಏಕದಂತ.. ಜಪಿಸುತ್ತ ಸಮಾಧಾನ ಹೇಳಿಕೊಳ್ಳುವಂಥಾ ಪರಿಸ್ಥಿತಿ. ಯಾಕೆಂದರೆ, ಕಿರ್ದಿ ಪುಸ್ತಕದಲ್ಲಿ ದಾಖಲಾಗಿರುವಂತೆ ಪೂನಂಗಾಗಿ ಆದ ಒಟ್ಟು ಖರ್ಚು 5 ಲಕ್ಷವನ್ನೂ ಮೀರಿದೆ!

ಪೂನಂ ಡಿಮ್ಯಾಂಡುಗಳು ತೀರಾ ಸಿಂಪಲ್‌. ಆಕೆ ಲ್ಯಾನ್ಸರ್‌ ಕಾರು ಬೇಕು ಅಂತೇನೂ ಕೇಳಲಿಲ್ಲ. ಅದಕ್ಕಾಗೇ ರಮೇಶ್‌ ಓಡಾಡಲು ಹವಾ ನಿಯಂತ್ರಿತ ಕ್ಯಾಲಿಸ್‌ ಕೊಟ್ಟರು. ಇಳಿದುಕೊಳ್ಳಲು ಫೈವ್‌ ಸ್ಟಾರ್‌ ಹೊಟೇಲು ರೂಮು ಕೊಟ್ಟರು. ಶೂಟಿಂಗ್‌ಗೆ ಬನ್ನೀಮ್ಮಾ ಅಂತ ಬೆಳಗ್ಗೆ 7 ಗಂಟೆಗೆ ರೂಮಿನ ಬಾಗಿಲು ಬಡಿಯೋಕೆ ಶುರುವಿಟ್ಟರೆ, ತಾಸುಗಳು ಕಳೆದ ನಂತರವೇ ಆಕೆ ಚಿಲಕ ತೆಗೆಯೋದು. ಒಮ್ಮೆ ಒಂದು ಶಾಟ್‌ನಲ್ಲಿ ಮಾತ್ರ ನಟಿಸೋದು. ಆಮೇಲೆ ಒಪ್ಪಿಗೆ- ಅಪ್ಪಣೆಗಳನ್ನು ನಿರೀಕ್ಷಿಸದೆಯೇ ಸೀದಾ ಕ್ಯಾಲಿಸ್‌ ಹತ್ತಿ , ಎಂಜಿ ರೋಡಿಗೋ ಬ್ರಿಗೇಡ್‌ ರೋಡಿಗೋ ಹೊರಟು ಹೋಗುತ್ತಾಳೆ.

ಎಲ್ಲಕ್ಕೂ ಹೋಗಲಿ ಅನ್ನೋಣವೆಂದರೆ, ನಿರ್ದೇಶಕರು ಹೇಳಿದ ಮಾತನ್ನು ಕೇಳೋದೇ ಇಲ್ಲ. ಬಂಡೆ ಮೇಲೆ ಮಲಗಮ್ಮ ಅಂದರೆ, ಬಿಸಿಲಿಗೆ ಮುಖ ಮಾಡಿ, ಸುಡು ಬಂಡೆ ಮೇಲೆ ಮಲಗಿದರೆ ಸುಟ್ಟು ಕರಕಲಾಗುತ್ತೇನೆ. ನನ್ನ ಕಂಪ್ಲೆಕ್ಷನ್‌ ಹಾಳಾಗುತ್ತೆ ಅಂತ ಖಂಡಾ ತುಂಡಾಗಿ ಹೇಳಿದ್ದಾಳೆ ಪೂನಂ. ವಿಷ ಕುಡಿಯಮ್ಮಾ ಅಂದರೆ, ನಿಜವಾದ ವಿಷ ಕೊಡ್ತಿದೀರಿ. ಖಂಡಿತ ಕುಡಿಯಲ್ಲ ಅಂದಿದ್ದಾಳೆ. ಯಾರೋ ತಮಾಷೆಗೆ ಅದು ನಿಜವಾದ ವಿಷ ಅಂದಿದ್ದನ್ನು ಪೂನಂ ಕೇಳಿಸಿಕೊಂಡದ್ದೇ ಇದಕ್ಕೆ ಕಾರಣ. ಕೊನೆಗೆ ಬಿಸ್ಲೆರಿ ನೀರನ್ನೇ ಕುಡಿಸಿ, ಪೂನಂ ಕೆಲಸ ಮುಗಿಸಿ ಕಳಿಸಿದ್ದಾಯಿತು.

ಪರ ನಾಯಕಿಯರ ಸಹವಾಸದ ಪಿರಿ ಪಿರಿ ಸಾಕಪ್ಪಾ ಸಾಕು ಅನ್ನುವ ಬೆನಕ ರಮೇಶ್‌ ಸದ್ಯಕ್ಕೆ ಹೇಳಿಕೊಂಡು ಓಡಾಡುತ್ತಿರುವುದು ಪೂನಂ ಕೊಟ್ಟ ಕಾಟದ ಅಳಲನ್ನು. ಮತ್ತದೇ ಮಾತು- ಪೂನಮ್ಮಾ... ಸಾಕಮ್ಮಾ !

English summary
Meet Poonam, The trouble!

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X